ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಈ ವ್ಯಕ್ತಿಯಿಲ್ಲದೆ ನಾನೇನೂ ಅಲ್ಲ ಎಂದ ನಟಿ ಆಲಿಯಾ ಭಟ್

Untitled design (77)
Published on

ಮುಂಬೈ: ಗುರುವಾರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ಬಾಲಿವುಡ್​ ನಟಿ ಆಲಿಯಾ ಭಟ್ ಭಾಜನರಾಗಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಬಾಲಿವುಡ್​ ಬೆಡಗಿ ಆಲಿಯಾ ಭಟ್​ ತಮ್ಮ ಯಶಸ್ಸಿಗೆ ಕಾರಣವಾದ ತೆರೆ ಹಿಂದಿನ ವ್ಯಕ್ತಿಯೊಬ್ಬರಿಗೆ, "ನೀವಿಲ್ಲದೆ ನಾನು ಏನೂ ಅಲ್ಲ" ಎಂದು ಹೇಳಿದ್ದಾರೆ. ಆಲಿಯಾ ಮ್ಯಾನೇಜರ್ ವೈಶಾಲಿ ಭಾಟಿಯಾ ಕಳುಹಿಸಿದ ಅಭಿನಂದನೆಗೆ ಈ ಉತ್ತರ ಪ್ರತಿಕ್ರಿಯೆಯಾಗಿ ಲಭಿಸಿದೆ.

'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕೆ ಆಲಿಯಾ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದ ಬೆನ್ನಲ್ಲೇ ವೈಶಾಲಿ ತಮ್ಮ ಅಭಿನಂದನೆಗಳನ್ನು ಈ ರೀತಿ ತಿಳಿಸಿದ್ದಾರೆ. “ಎಷ್ಟೋ ನಟರಿದ್ದಾರೆ, ಅವರಲ್ಲಿ ಆಲಿಯಾ ಭಟ್! ತಮ್ಮದೇ ಹಾದಿಯಲ್ಲಿ ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಪ್ರತಿದಿನ ನಮಗೆ ಸ್ಫೂರ್ತಿ ನೀಡುತ್ತಾರೆ. ಇಂದು ಮಾತ್ರವಲ್ಲದೆ ಪ್ರತಿ ಕ್ಷಣವೂ ನಿಮ್ಮ ತಂಡದಲ್ಲಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದಕ್ಕೆ ಅಭಿನಂದನೆಗಳು. ಇನ್ನೂ ಹೆಚ್ಚು ವರ್ಷಗಳ ಕಾಲ ನೀವು ಪ್ರೇಕ್ಷಕರನ್ನು ಮನರಂಜಿಸಬೇಕು, ಹಲವಾರು ಪ್ರಶಸ್ತಿಗಳು ನಿಮ್ಮದಾಗಬೇಕು" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ವೈಶಾಲಿ ಅವರ ಅಭಿನಂದನೆ ಪೋಸ್ಟ್​ಗೆ ಪ್ರತಿಕ್ರಿಯಿಸಿದ ಆಲಿಯಾ, "ನೀವಿಲ್ಲದೆ ನಾನು ಏನೂ ಅಲ್ಲ, ಲವ್​ ಯೂ" ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಟಿಯ ಸರಳತೆ, ಪ್ರೀತಿಗೆ ಮೆಚ್ಚಿ, ವ್ಯಾಪಕವಾಗಿ ಕಮೆಂಟ್​ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net