

Impossible Escape:ಜಗತ್ತೇ ಒಂದು ವಿಷ್ಮಯ ಪ್ರಪಂಚ ಇಲ್ಲಿ ಏತ್ತ ನೋಡಿದರೂ ವಿಶೇಷಗಳ ಮಹಾಪೂರವೇ ಕಾಣ ಸಿಗುತ್ತದೆ. ಈವರೆಗೆ ಮನುಷ್ಯನಿಗೆ ಪ್ರಕೃತಿಯ ಬಗ್ಗೆ ಸಂಪೂರ್ಣ ಅರ್ಥಮಾಡಿಕೊಳ್ಳಲು ಸಾಧ್ಯವೆ ಆಗಿಲ್ಲ. ಸಾಮಾನ್ಯವಾಗಿ ಎಲ್ಲರೂ ಬಾರ್ಮೊಡ ಟ್ರೈಯಾಂಗ್ಲ್ಸ್ ಕುರಿತು ಕೇಳಿರಬಹುದು. ಆ ಸ್ಥಳಕ್ಕೆ ಹೊರಟ ಹಡಗು ಮತ್ತು ವಿಮಾನಗಳು ನಾಪತ್ತಯಾಗುತ್ತಿವೆ ಎಂಬ ವರದಿಯಗಳಿವೆ. ಅಲ್ಲದೆ, ಈ ಬಗ್ಗೆ ಸಿನಿಮಾಗಳನ್ನು ಕೂಡ ಮಾಡಿದ್ದಾರೆ. ಇದೀಗ ಅಂಥದ್ದೆ ಪ್ರದೇಶದ ಬಗ್ಗೆ ತಿಳಿಯೋಣ ಬನ್ನಿ..
ಹೌದು, ಪ್ರಪಂಚದಾದ್ಯಂತದ ದೇಶಗಳು ನಿರಂತರವಾಗಿ ಪ್ರಗತಿ ಸಾಧಿಸುತ್ತಿವೆ ಮತ್ತು ತಮ್ಮನ್ನು ತಾವು ಬಲಪಡಿಸಿಕೊಳ್ಳುವಲ್ಲಿ ತೊಡಗಿಸಿಕೊಂಡಿವೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ಜಗತ್ತು ಇಡೀ ಮಾನವೀಯತೆಯನ್ನು ಯಾವುದೇ ಸಮಯದಲ್ಲಿ ನಾಶಮಾಡಬಹುದಾದ ಗನ್‌ಪೌಡರ್ ರಾಶಿಯ(ನ್ಯೂಕ್ಲಿಯರ್ ಬಾಂಬ್) ಮೇಲೆ ಕುಳಿತಿದೆ.
ಎಲ್ಲೋ ಅಪಾಯಕಾರಿ ವಿಕಿರಣವು ಕ್ಷಣಾರ್ಧದಲ್ಲಿ ಲಕ್ಷಾಂತರ ಜನರನ್ನು ನುಂಗಿತ್ತು ಎನ್ನುವುದನ್ನು ಹಲವು ವರ್ಷಗಳ ಹಿಂದೆ ಕೆಲ ಪ್ರದೇಶಗಳಲ್ಲಿ ನೋಡಿದ್ದೇವೆ ಅಥವಾ ಕೇಳಿದ್ದೇವೆ. ಇದೀಗ ಅದೇ ಸ್ಥಳದ ಬಗ್ಗೆ ತಿಳಿಯೋಣ..
ಅಲ್ಲಿ ಹಲವು ದಶಕಗಳಿಂದೆ ವಿಕಿರಣಗಳ ಕಾರಂಣದಿಂದ ಅಂತಹ ಒಂದು ಘೋರ ಘಟನೆ ನಡೆದಿತ್ತು. ಅಲ್ಲಿ ಇದೀಗ 10 ನಿಮಿಷಗಳ ಕಾಲ ನಿಂತರು ಮನುಷ್ಯ ಕರಲಗಲು ಆರಂಭಿಸುತ್ತಾನೆ. ಈ ಸ್ಥಳಕ್ಕೆ ಇಂದಿಗೂ ಮನುಷ್ಯ ಭಯಡುತ್ತಾನೆ. ಇದಕ್ಕೆ ಕಾರಣ ಇಲ್ಲಿ ದುಪಟ್ಟು ವಿಕಿರಣಗಳು ಒಂದೇ ಕಡೆ ಕೇಂದ್ರಿಕರಣಗೊಂಡಿವೆ. ಹೀಗಾಗಿ, ಅಲ್ಲಿ ಮನುಷ್ಯ ಸೇರಿದಂತೆ ಎಲ್ಲರೂ ಮಟಾಷ್ ಗ್ಯಾರಂಟಿ ಎನ್ನುತ್ತಾರೆ ತಜ್ಞರು.
ಈ ಸ್ಥಳ ಯುಕ್ರೇನ್ನಲ್ಲಿದೆ. ಇದನ್ನು ಜನರು ಚನೋರ್ಬಿಲ್ ಎಂದು ಕರೆಯುತ್ತಾರೆ. 1986ರಲ್ಲಿ ಇಲ್ಲಿ ಒಂದು ಭೀಕರ ಅಪಘಾತ ನಡೆದಿತ್ತು. ಅದು ವಿಷಗಾಳಿ ಹರಡಿತ್ತು.(ವಿಕಿರಣಗಳ ವಿಷ) ಘಟನೆಯಲ್ಲಿ ಅಲ್ಲಿನ ಸ್ಥಾವರದ 40 ಅಧಿಕ ಮಂದಿ ಸಾವಿಗಿಡಾಗಿದ್ದರು. ಇದರಲ್ಲಿ ಬದುಕುಳಿದ 50 ಸಾವಿರಕ್ಕೂ ಅಧಿಕ ಜನರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆ. ಇದರಿಂದ 4 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.
ಹೀಗಾಗಿ, ಈ ವಿಕಿರಣವು ತುಂಬಾ ಅಪಾಯಕಾರಿಯಾಗಿದ್ದು, ಇದರ ಪರಿಣಾಮ 1,110 ವರ್ಷಗಳು ಕಾಲ ಇರುತ್ತದೆ. ಆದರಿಂದ ಅಲ್ಲಿಯವರೆಗೂ ಅಲ್ಲಿಗೆ ಕಾಲಿಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ನೀವು ಈ ಚೆರ್ನೋಬಿಲ್ ಸ್ಥಾವರದ ಭಗ್ನಾವಶೇಷಗಳ ಮುಂದೆ 10 ನಿಮಿಷಗಳಾದರೂ ನಿಂತರೂ, ನಿಮ್ಮ ದೇಹವು ಕೆಲವೇ ಸಮಯದಲ್ಲಿ ನಾಶವಾಗುತ್ತದೆ. ಏಕೆಂದರೆ ಇಂದಿಗೂ ಇಲ್ಲಿ ಕೋಟಿ ಪಟ್ಟು ಹೆಚ್ಚು ವಿಕಿರಣವಿದೆ.(ಏಜೆನ್ಸೀಸ್)