

ಸಾಗರ: ಸರ್ಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ತಾಲೂಕಿನ ರೋಗಿಗಳೂ ದಾಖಲಾಗುತ್ತಿದ್ದಾರೆ. ಹಾಗಾಗಿ ಕಾರ್ಯದೊತ್ತಡ ಹೆಚ್ಚು. ಡೆಂೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಒಂದು ದಿನ ಕರ್ತವ್ಯಕ್ಕೆ ಗೈರಾದರೆ ಅವರ ಒಂದು ತಿಂಗಳ ವೇತನ ತಡೆ ಹಿಡಿಯುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸಿವಿಲ್ ಸರ್ಜನ್‌ಗೆ ಸೂಚಿಸಿದರು.
ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಡೆಂೆ ಪೀಡಿತ ರೋಗಿಗಳ ವಾರ್ಡ್‌ನ ಸೌಲಭ್ಯ ಪರಿಶೀಲಿಸಿ ಮಾತನಾಡಿದ ಅವರು, ವೈದ್ಯರು ಯಾವ ಕಾರಣಕ್ಕೂ ಕರ್ತವ್ಯಕ್ಕೆ ಗೈರಾಗುವುದು, ವಿಳಂಬವಾಗಿ ಹಾಜರಾಗುವುದು ಮಾಡಬೇಡಿ. ಈ ಮೂಲಕ ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದು ತಿಳಿಸಿದರು.
ಉಪವಿಭಾಗೀಯ ಆಸ್ಪತ್ರೆಗೆ 1.85 ಕೋಟಿ, ತಾಯಿ-ಮಗು ಆಸ್ಪತ್ರೆಗೆ 1.65 ಕೋಟಿ ರೂ. ತುರ್ತು ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ ಆಸ್ಪತ್ರೆ ಮೂಲ ಸೌಲಭ್ಯ, ಉದ್ಯಾನವನ, ಸುತ್ತಲೂ ಮೆಷ್ ಅಳವಡಿಕೆ ಮಾಡಲಾಗುತ್ತಿದೆ. ನಾನು ಅಕಾರಕ್ಕೆ ಬರುವ ಮುನ್ನ ನಾಲ್ಕು ಡಯಾಲಿಸಿಸ್ ಯಂತ್ರಗಳಿದ್ದವು. ಈಗ 16 ಯಂತ್ರಗಳಿವೆ.ಉತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ ಎಂದರು.
ಎರಡೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸಚಿವರಿಗೆ ಮನವಿ ಮಾಡಲಾಗಿದೆ. ರೋಗಿಗಳಿಗೆ ನೀಡುವ ಆಹಾರದಲ್ಲೂ ಗುಣಮಟ್ಟ ಕಾಪಾಡುವಂತೆ ಸೂಚಿಸಲಾಗಿದೆ. ಗ್ರಾಮೀಣ ಆಸ್ಪತ್ರೆಗಳ ಅಭಿವೃದ್ಧಿಗೂ ಹಣ ಬಂದಿದೆ ಎಂದು ಹೇಳಿದರು.
ಉಪವಿಭಾಗೀಯ ಆಸ್ಪತ್ರೆಯಲ್ಲಿ 14, ತಾಯಿ-ಮಗು ಆಸ್ಪತ್ರೆಯಲ್ಲಿ 6 ವೈದ್ಯರಿದ್ದಾರೆ. ಈ ಹಿಂದೆ ಸಾಗರ ನಂ.1 ಆಸ್ಪತ್ರೆ ಎಂದು ರಾಜ್ಯದಲ್ಲಿ ಗುರುತಿಸಿಕೊಂಡಿತ್ತು. ಈ ಬಾರಿಯೂ ನಂ.1 ಸ್ಥಾನಕ್ಕೆ ಹೋಗುವುದು ಖಚಿತ. ವಿಶೇಷವಾಗಿ ಡೆಂೆ ಪೀಡಿತರ ಬೆಡ್‌ಗಳಿಗೆ ವೈಜ್ಞಾನಿಕವಾದ ಸೊಳ್ಳೆ ಪರದೆಗಳನ್ನು ಅಳವಡಿಸಲಾಗಿದೆ. ಪರದೆ ಮೇಲೆ ಸೊಳ್ಳೆ ಕುಳಿತರೆ ಅದು ತಾನಾಗಿಯೇ ಸತ್ತು ಹೋಗುತ್ತದೆ. ಡೆಂೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಜನತೆ ಆತಂಕ ಪಡಬೇಕಿಲ್ಲ ಎಂದರು
ಸಿವಿಲ್ ಸರ್ಜನ್ ಡಾ. ಪರಪ್ಪ, ಪ್ರಮುಖರಾದ ಚೇತನರಾಜ್ ಕಣ್ಣೂರು, ಸೋಮಶೇಖರ, ಹೊಳೆಯಪ್ಪ, ಚಂದ್ರಪ್ಪ, ತಾರಾಮೂರ್ತಿ, ಸುರೇಶಬಾಬು, ಡಿ. ದಿನೇಶ್, ಗಣಪತಿ, ನಾರಾಯಣಪ್ಪ ಇತರರಿದ್ದರು.