ಸಂಭ್ರಮ, ಸಡಗರದಿಂದ ಜರುಗಿದ ಮೈಲಾರ ದೇವರ ಉತ್ಸವ

25-RNR-03
Published on

ರಾಣೆಬೆನ್ನೂರ: ನಗರದ ಕೋಟೆ ಓಣಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಚಿಕ್ಕಯ್ಯ, ದೊಡ್ಡಯ್ಯ ಮತ್ತು ಮೈಲಾರ ದೇವರ ಉತ್ಸವ ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಸಂಭ್ರಮ ಸಡಗರದಿಂದ ಜರುಗಿತು.
ಭಾನುವಾರದಂದು ಚಿಕ್ಕಯ್ಯ ದೇವರಿಗೆ ಕಾಕಡಾರತಿ, ಮಲ್ಹಾರಿ ಸಹಸ್ರನಾಮ ಪೂರ್ವಕ ಭಂಡಾರಾರ್ಚನೆ, ರುದ್ರಾಭಿಷೇಕ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿದವು. ಸೋಮವಾರ ಬೆಳಗ್ಗೆ ದೊಡ್ಡಯ್ಯ ದೇವರಿಗೆ ಕಾಕಡಾರತಿ, ರುದ್ರಾಭಿಷೇಕ, ಗಣಪತಿ ಹಾಗೂ ಮಲ್ಹಾರಿ ಹೋಮ, ಪೂರ್ಣಾಹುತಿ ಮತ್ತು ಪ್ರಸಾದ ವಿತರಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.
ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ನಾಗರಾಜ ಕುಲಕರ್ಣಿ, ಶ್ರೀನಿವಾಸ ಜೋಶಿ, ಅರುಣಕುಮಾರ ಮುದ್ರಿ, ಶ್ರೀಪಾದ ಕುಲಕರ್ಣಿ, ರವೀಂದ್ರ ವರಗಿರಿ, ರವೀಂದ್ರ ಕುಲಕರ್ಣಿ, ಮಲ್ಹಾರ ನಾಡಿಗೇರ, ಮಹೇಶ ನಾಡಿಗೇರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net