

ಚಿತ್ರದುರ್ಗ: ಹಿರೇಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಈಚೆಗೆ ಆಯೋಜಿಸಿದ್ದ ತುರುವನೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ತುರುವನೂರು ಸರ್ಕಾರಿ ಪಿಯು ಕಾಲೇಜ್ (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಬಾಲಕರ ಕಬ್ಬಡಿ ಪ್ರಥಮ, ಬಾಲಕರ ಖೋಖೋ ಪ್ರಥಮ, ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀ, 200 ಮೀಟರ್ ಓಟದಲ್ಲಿ ಶಾಲೆಯ ಚಿನ್ಮಯಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಾಲಕರ ವಿಭಾಗದಲ್ಲಿ ತ್ರಿವಿಧ ಜಿಗಿತ, ಉದ್ದ ಜಿಗಿತ, ಸರಪಳಿ ಗುಂಡು ಎಸೆತದಲ್ಲಿ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.