ತಮಿಳುನಾಡಿನಲ್ಲಿ ಫೆಂಗಲ್​ ಅಬ್ಬರ: ಬಿರುಗಾಳಿಯ ನಡುವೆ ಲ್ಯಾಂಡಿಂಗ್​ಗೆ ಪರದಾಡಿದ ವಿಮಾನದ ವಿಡಿಯೋ ವೈರಲ್​ | Fengal cyclone

Fengal cyclone
Published on

ಚೈನ್ನೈ: ತಮಿಳುನಾಡಿನಲ್ಲಿ ಫೆಂಗಲ್( Fengal cyclone)​ ಚಂಡಮಾರುತದ ಅಬ್ಬರ ಶುರುವಾಗಿದ್ದು, ಮಳೆ ಜತೆ ಭಾರೀ ಗಾಳಿ ಬೀಸುತ್ತಿದೆ. ಇದರ ನಡುವೆ ರಾಜಧಾನಿ ಚೈನ್ನೈನ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಫ್ಲೈಟ್​ವೊಂದು ಲ್ಯಾಂಡ್​ ಆಗುವ ಹರಸಹಾಸ ಮಾಡುತ್ತಿರುವ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

ತಮಿಳುನಾಡು ಮತ್ತು ಪುದುಚೇರಿಯಲ್ಲಿ ಗುರುವಾದಿಂದಲೇ ಮಳೆಯಾಗುತ್ತಿದ್ದು, ಭಾನುವಾರ ಮಳೆಯ ತೀವ್ರತೆ ಅಧಿಕವಾಗಿದೆ. ಇದರಿಂದ ಭಾನುವಾರ ಮುಂಜಾನೆ 4 ರಿಂದಲೇ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಚೈನ್ನೈನಲ್ಲಿ ಮಳೆ-ಗಾಳಿಯಿಂದಾಗುವ ಅನಾಹುತಹಗಳ ವಿಡಿಯೋಗಳು ಭಾರೀ ಸದ್ದು ಮಾಡಿತ್ತಿದ್ದು, ಈವರೆಗೆ ಮೂವರು ಮೃಟ್ಟಿದ್ದಾರೆ. ಇದೆಲ್ಲದ ಮಧ್ಯೆ ಇದೀಗ ವಿಮಾನ ಲ್ಯಾಂಡ್​ ಆಗುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ, ನೊಡುಗರನ್ನು ಈ ದೃಶ್ಯಗಳು ಆಶ್ಚರ್ಯಚಕಿತಗೊಳಿಸಿದೆ.

ಭಾರೀ ಮಳೆ ಮತ್ತು ಬಲವಾಗಿ ಬೀಸುತ್ತಿರುವ ಗಾಳಿ ನಡುವೆ ವಿಮಾನವೊಂದು ಲ್ಯಾಂಡ್​ ಆಗಲು ಪ್ರಯತ್ನಿಸುತ್ತಿದೆ. ಅಲ್ಲದೆ, ವಿಮಾನ ಚಕ್ರಗಳು ನೆಲಕ್ಕೆ ತಾಗುವ ಮುಂಚೆನೆ ಮೇಲಕ್ಕೆ ಹಾರಿಹೋಗಿ ಮತ್ತೆ ಲ್ಯಾಂಡ್​ ಆಗಿರುವ ದೃಶ್ಯಗಳು ಸೆರೆಯಾಗಿವೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಚೈನ್ನೈನ @Aviationbrk ಖಾತೆ, ಹೀಗೆ ಬರೆದುಕೊಂಡಿದ್ದಾರೆ. ಫೆಂಗಲ್​ ಚಂಡಮಾರುತ ಇದೀಗ ತಮಿಳುನಾಡು ತಲುಪಿದ್ದು, ಭಾರಿ ಅವಂತಾರಗಳನ್ನು ಸೃಷ್ಠಿಸಿದೆ. ಎಐಐ ಪ್ರಧಾನ ಕಚೇರಿ ವಾಕ್ಯವನ್ನು ಉಲ್ಲೇಖಿಸಿ, ಶನಿವಾರ ಚೈನ್ನೈನ ವಿಮಾನ ಮುಚ್ಚಲಾಗಿದ್ದು, ಡಿ.01ರವರೆಗೆ ಮುಂದುವರಿಸಲಾಗಿದೆ. ಈ ಕುರಿತು ನಿಮ್ಮ ವಿಮಾನಗಳ ಬಗ್ಗೆ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಚರ್ಚಿಸಿ ಮುಂದಿನ ಪ್ರಯಾಣದ ಬಗ್ಗೆ ಪರಿಶೀಲಿಸಿ ಎಂದು ಶಿಫಾರಸ್ಸು ಮಾಡಲಾಗಿದೆ.

ಫೆಂಗಲ್​ ಚಂಡಮಾರುತದಿಂದ ಸಂಭವಿಸಿದ ಅನಾಹುತ

ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಿಂದಾಗಿ ಚೆನ್ನೈನಲ್ಲಿ ಎರಡು ರನ್‌ವೇಗಳು ಮತ್ತು ಟ್ಯಾಕ್ಸಿವೇ ಮುಳುಗಿದ್ದರಿಂದ ಶನಿವಾರ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವಿಡಿಯೋಗಳಲ್ಲಿ ಪ್ರವೇಶ ದ್ವಾರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸಿದೆ. 24 ದೇಶೀಯ ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು 26 ಅಂತಾರಾಷ್ಟ್ರೀಯ ವಿಮಾನಗಳು ಆಗಮನ ಮತ್ತು ನಿರ್ಗಮನ ವಿಳಂಬವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ಗಂಟೆಗಳಲ್ಲಿ ಪುದುಚೇರಿಯ ಪ್ರವಾಹ ಪ್ರದೇಶಗಳಲ್ಲಿ ಭಾರತೀಯ ಸೇನೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಪುದುಚೇರಿಯ ಕೃಷ್ಣನಗರದ ಕೆಲವು ಪ್ರದೇಶಗಳಲ್ಲಿ ಐದು ಅಡಿಗಳಷ್ಟು ನೀರು ನಿಂತಿದೆ. ಸುಮಾರು 500 ಮನೆಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸುವ ಕಾರ್ಯವನ್ನು ಸೇನಾ ತಂಡ ನಿರ್ವಹಿಸುತ್ತಿದೆ. ಈವರೆಗೆ 100ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಇನ್ನು ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಬೀರಿದೆ. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ತುಂತುರು ಮಳೆಯಾದರೆ, ಈಗಲೂ ಮೋಡ ಕವಿದ ವಾತಾವರಣ ಇದೆ. ಮೈಸೂರು, ಚಾಮರಾಜನಗರ ಸೇರಿದಂತೆ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. (ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net