

ಅವಳಿ ಮಕ್ಕಳು ಹುಟ್ಟುವುದು ಅಷ್ಟೊಂದು ಅಪರೂಪವಲ್ಲ. ಆದರೆ ಹಾಗೇ ಹುಟ್ಟಿದ ಅವಳಿ ಮಕ್ಕಳು ಬೆಳೆದು ದೊಡ್ಡದಾಗಿ, ಇನ್ನೊಂದು ಅವಳಿಗಳನ್ನೇ ಮದುವೆಯಾಗುವುದು ಅಪರೂಪ. ಈಗ ಅಂಥದ್ದೇ ಒಂದು ವಿಶೇಷತೆಯನ್ನು ಅವಳಿಗಳು ಹಂಚಿಕೊಂಡಿದ್ದಾರೆ.
ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಎಂಬುವರು ನೋಡಲು ಒಂದೇ ರೀತಿ ಇರುವ ಅವಳಿ ಹೆಣ್ಣುಮಕ್ಕಳು. ಇವರಿಬ್ಬರೂ ಜೋಶ್ ಹಾಗೂ ಜೆರೆಮಿ ಸ್ಯಾಲಿಯರ್ಸ್ ಎಂಬ ಇಬ್ಬರು ಅವಳಿ ಸಹೋದರರ ಮದುವೆಯಾಗಿದ್ದಾರೆ. ಈಗ ತಮ್ಮ ಇನ್ಸ್ಟಾಗ್ರಾಂ ಮೂಲಕ ಒಂದು ವಿಶೇಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಈ ಇಬ್ಬರು ಅವಳಿ ದಂಪತಿಗಳು ಫುಲ್ ಖುಷಿಯಾಗಿದ್ದಾರೆ. ಒಂದೇ ದಿನ, ಒಂದೇ ರೀತಿ ಕಾಣುವ ಸಹೋದರನ್ನು ವಿವಾಹವಾದ ಅವಳಿ ಯುವತಿಯರಾದ ಬ್ರಿಟಾನಿ ಮತ್ತು ಬ್ರಿಯಾನಾ ಇಬ್ಬರೂ ಈಗ ಗರ್ಭಿಣಿಯರೂ. ಒಂದೇ ಸಲ ಗರ್ಭ ಧರಿಸಿದ್ದು ಸಿಕ್ಕಾಪಟೆ ಖುಷಿ ತಂದಿದೆ ಎಂದು ಇವರು ಹೇಳಿದ್ದಾರೆ.
ಆಗಸ್ಟ್ 14ರಂದು ಸ್ಯಾಲಿಯರ್ಸ್ ವಿನ್ಸ್ ಎಂಬ ಹೆಸರಿನ ಇನ್ಸ್ಟಾ ಖಾತೆಯಲ್ಲಿ ದಂಪತಿಗಳು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಏನು ಗೊತ್ತಾ? ನೀವು ಊಹಿಸಬಲ್ಲಿರಾ?... ಇದನ್ನೂ ಓದಿ: VIDEO| ಆಕಾಶದಿಂದ ವ್ಯಕ್ತಿಯ ತಲೆಯ ಮೇಲೆ ಬಿದ್ದ ಬೆಕ್ಕು: ಮುಂದೇನಾಯ್ತು ನೀವೇ ನೋಡಿ…!
ಇಬ್ಬರೂ ಗರ್ಭಿಣಿಯರಾಗಿದ್ದಾರೆ. ಇಬ್ಬರೂ ದಂಪತಿಗಳು ಒಟ್ಟಿಗೇ ಪಾಲಕರಾಗುತ್ತಿರುವ ಸಿಹಿ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ರೋಮಾಂಚನಕಾರಿ ಎನ್ನಿಸುತ್ತದೆ. ಈ ಬಗ್ಗೆ ನಾವು ಕೃತಜ್ಞರಾಗಿದ್ದೇವೆ.
ನಮ್ಮ ಮಕ್ಕಳು ಕೇವಲ ಸೋದರ ಸಂಬಂಧಿಗಳು ಆಗಿರುವುದಿಲ್ಲ. ಬದಲಿಗೆ ಆನುವಂಶಿಕವಾಗಿ ಒಡಹುಟ್ಟಿದವರಾಗಿರುತ್ತಾರೆ. ಅವರಿಗಾಗಿ ತುಂಬ ಕಾತರದಿಂದ ಕಾಯುತ್ತಿದ್ದೇವೆ ಎಂದು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಸಿಕ್ಕಾಪಟೆ ಲೈಕ್ಸ್, ಕಾಮೆಂಟ್ಗಳು ಬರುತ್ತಿವೆ. ಇದೊಂದು ವಿಶೇಷ ಸಂದರ್ಭ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರಂತೂ ಇದೊಂದು ಪವಾಡವೇ ಸರಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)