VIDEO| ಆಕಾಶದಿಂದ ವ್ಯಕ್ತಿಯ ತಲೆಯ ಮೇಲೆ ಬಿದ್ದ ಬೆಕ್ಕು: ಮುಂದೇನಾಯ್ತು ನೀವೇ ನೋಡಿ...!

Cat
Published on

ಬೀಜಿಂಗ್​: ಇದೆಂಥಾ ವಿಚಿತ್ರ ನೋಡಿ... ರಸ್ತೆಯಲ್ಲಿ ಸುಮ್ಮನೇ ನಡೆದು ಹೋಗುತ್ತಿದ್ದ ವ್ಯಕ್ತಿಯ ತಲೆಯ ಮೇಲೆ ಬೆಕ್ಕೊಂದು ಆಕಾಶದಿಂದ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಈಶಾನ್ಯ ಚೀನಾದ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಹರ್ಬಿನ್​ ನಗರದಲ್ಲಿ. ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಗೌ ಫೆಂಗ್ವಾ ಎಂದು ಗುರುತಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?: ಫೆಂಗ್ವಾ ತನ್ನ ಎರಡು ಕೈಗಳನ್ನು ಬೆನ್ನ ಹಿಂದೆ ಹಾಕಿಕೊಂಡು ರಸ್ತೆಯಲ್ಲಿ ಸುಮ್ಮನೇ ನಡೆದು ಹೋಗುವಾಗ ಇದ್ದಕ್ಕಿದ್ದಂತೆ ಬೆಕ್ಕೊಂದು ಆಕಾಶದಿಂದ ಆತನ ತಲೆಯ ಮೇಲೆ ಬೀಳುತ್ತದೆ. ತಕ್ಷಣ ಫೆಂಗ್ವಾ ಅಲ್ಲಿಯೇ ಕುಸಿದು ಬೀಳುತ್ತಾನೆ. ಇತ್ತ ಬೆಕ್ಕು ಓಡಿ ಹೋಗುತ್ತದೆ. ಫೆಂಗ್ವಾ ಸಾಕು ನಾಯಿಗೆ ತನ್ನ ಮಾಲೀಕನಿಗೆ ಏನಾಗಿದೆ ಎಂಬ ಅರಿವಾಗದೇ ಕೆಲವೊತ್ತಿನ ಬಳಿಕ ಆತ ಬಿದ್ದಿರುವ ಸ್ಥಳಕ್ಕೆ ಬರುತ್ತದೆ. ಬಳಿಕ ಪಕ್ಕದ ಮನೆಯ ಮುಂದೆ ನಿಂತಿದ್ದ ಬೆಕ್ಕಿನ ಜಗಳವಾಡುತ್ತದೆ.

ಬೆಕ್ಕು ಆಕಾಶದಿಂದ ಬಿತ್ತಾ?

ಮೂಲಗಳ ಪ್ರಕಾರ ಬೆಕ್ಕು ಸ್ಥಳೀಯ ಹಿರಿಯ ನಾಗರಿಕರೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅಪಾರ್ಟ್​ಮೆಂಟ್​ ಒಂದು ಬಾಲ್ಕನಿಯಿಂದ ಬೆಕ್ಕು ಕೆಳಕ್ಕೆ ಜಿಗಿದಾಗ ಫೆಂಗ್ವಾ ಮೇಲೆ ಬಿದ್ದಿದ್ದು, ಅವರಿಗೆ ಹೆಚ್ಚೇನೂ ತೊಂದರೆಯಾಗಿಲ್ಲ. ಸದ್ಯ ಫೆಂಗ್ವಾ ತನ್ನ ನೆರೆಹೊರೆಯವರೊಂದಿಗೆ ಪರಿಹಾರ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net