ತುಳಸಿ ಗಿಡದಲ್ಲಿ ಹೂವುಗಳು ಅರಳಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆಯೇ? Tulsi

tulasi
Published on

ತುಳಸಿಯನ್ನು ನಂಬಿಕೆ ಮತ್ತು ಭಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಅನೇಕ ಪ್ರಯೋಜನಗಳನ್ನು ಒಳಗೊಂಡಿದ್ದು, ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತದೆ. ಜ್ಯೋತಿಷ್ಯದ ಪ್ರಕಾರ ತುಳಸಿಯು ವಿಷ್ಣುವಿನ ಒಂದು ರೂಪವಾಗಿದೆ. ಅದರ ಹೂವುಗಳು ಭಗವಂತನ ಆಶೀರ್ವಾದವನ್ನ ಮನೆಗಳಿಗೆ ತರುತ್ತದೆ ಎನ್ನಲಾಗಿದೆ.

Tulsi| ನಮ್ಮ ಮನೆಯ ಬಳಿ ತುಳಸಿ ಗಿಡ ಹೂ ಬಿಡುವುದನ್ನು ನಾವು ನೋಡಿರುತ್ತೇವೆ. ಆದರೆ ಇದು ಕೇವಲ ನೈಸರ್ಗಿಕವಾಗಿ ಅರಳುವುದಿಲ್ಲ, ಬದಲಾಗಿ ಇದರ ಹಿಂದೆ ಒಂದು ಕಾರಣ ಇದೆ. ತುಳಸಿ ಗಿಡದಲ್ಲಿ ಹೂ ಅರಳುವುದರಿಂದ ಶುಭವಾಗುತ್ತದೆ ಎನ್ನಲಾಗಿದ್ದು, ನಮ್ಮ ಜೀವನದಲ್ಲಿ ಒಳಿತಾಗಿ ನಮ್ಮ ಕಷ್ಟಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.

ತುಳಸಿ ಗಿಡದಲ್ಲಿ ಹೂ ಬಿಡುವುದು ರೋಗಗಳಿಂದ ಮುಕ್ತಿಯನ್ನು ಸೂಚಿಸುತ್ತದೆ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ತುಳಸಿ ಗಿಡ ಹೂ ಬಿಟ್ಟಾಗ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂದು ಹೇಳಲಾಗಿದೆ.

ಜ್ಯೋತಿಷ್ಯದ ಪ್ರಕಾರ, ತುಳಸಿ ಹೂವು ಬ್ರಹ್ಮನ ಆಶೀರ್ವಾದದ ಸೂಚಕವಾಗಿದೆ. ತುಳಸಿ ಹೂವು ಅರಳಿದಾಗ, ನಿಮಗೆ ಒಳ್ಳೆಯದಾಗಲಿದೆ, ಯಶಸ್ಸಿನ ಆರಂಭ ಎಂದು ನೀವು ನಂಬಬಹುದು. ಶೀಘ್ರವೇ ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ ಎಂದರ್ಥ. ತುಳಸಿ ಹೂವು ಬಿಟ್ಟರೆ ನಿಮ್ಮ ಕಷ್ಟದ ಸಮಯ ಶೀಘ್ರದಲ್ಲೇ ಕೊನೆಗೊಂಡು, ನಿಮ್ಮ ಜೀವನದಲ್ಲಿನ ತೊಂದರೆಗಳು, ವ್ಯಾಪಾರ ಸಮಸ್ಯೆಗಳು ಕೊನೆಯಾಗುವುದನ್ನು ಸೂಚಿಸುತ್ತದೆ.

ತುಳಸಿ ಗಿಡ ಮದುವೆ ಹಾಗೂ ಮಕ್ಕಳ ಸಂತೋಷಕ್ಕೆ ಸಂಬಂಧಿಸಿದ ಶುಭ ಸೂಚನೆಯನ್ನು ತರುತ್ತದೆ. ಒಂದು ಕುಟುಂಬ ಏನಾದರೂ ಹೆಚ್ಚಿನ ಸಂತೋಷ ಹಾಗೂ ಶುಭ ಕಾರ್ಯಕ್ಕಾಗಿ ಕಾಯುತ್ತಿದ್ದರೆ ತುಳಸಿ ಗಿಡ ಹೂವು ಬಿಡುವಾಗ ಅದು ಆದಷ್ಟು ಬೇಗ ಈಡೆರುತ್ತದೆ ಎಂದು ನಂಬಲಾಗಿದೆ.

ತುಳಸಿ ಗಿಡ ಒಣಗಬಾರದು ಏಕೆ?

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ತುಳಸಿ ಗಿಡದಲ್ಲಿ ಹೂ ಕಾಣಿಸಿದ್ರೆ ಶುಭವಾಗುತ್ತದೆ. ಆದರೆ ಅದೇ ತುಳಸಿ ಗಿಡ ಒಣಗಲು ಶುರುವಾದ್ರೆ ಅದು ಅಶುಭವೆಂದು ಪರಿಗಣಿಸಲಾಗಿದೆ. ತುಳಸಿ ಒಣಗಿದರೆ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ತುಳಸಿ ಗಿಡ ಒಣಗುವುದು ನಿಮ್ಮ ಮನೆಯಿಂದ ಸಂಪತ್ತು ಹೊರಹೋಗುವುದರ ಸಂಕೇತವಾಗಿದೆ. ಪದೇ ಪದೇ ತುಳಸಿ ಗಿಡ ಒಣಗುತ್ತಿದ್ದರೆ ಪೂರ್ವಜರ ಋಣ ನಿಮ್ಮ ಮೇಲಿದೆ ಎಂದರ್ಥ. ಹಾಗಾಗಿ ದಾನದ ಮೂಲಕ ಈ ಋಣವನ್ನು ತೀರಿಸಬೇಕಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net