ಕರೊನಾದಿಂದ ಮನೆಯಲ್ಲೇ ಕೂತು ಕೂತು ಹೊಟ್ಟೆ ಬರಿಸಿಕೊಂಡ ಹಾಲಿವುಡ್ ನಟ ವಿಲ್ ಸ್ಮಿತ್!

will smith
Published on

ನ್ಯೂಯಾರ್ಕ್: ಹಾಲಿವುಡ್ ನಟ ವಿಲ್ ಸ್ಮಿತ್​ ಅವರ ಹೊಸ ಅವತಾರ ಕಂಡು ಅವರ ಅಭಿಮಾನಿಗಳು ಆವಕ್ಕಾಗಿದ್ದಾರೆ. ಕೋವಿಡ್​ ಲಾಕ್​ಡೌನ್​ನಿಂದ ಆಗಿರುವ ಎಡವಟ್ಟನ್ನು ಅವರು ತಮ್ಮ ಅಭಿಮಾನಿಗಳ ಎದುರು ತೆರದಿಟ್ಟಿದ್ದಾರೆ.

ಕಳೆದ ಒಂದು ವರ್ಷದಿಂದ ಕರೊನಾ ಲಾಕ್​ಡೌನ್ ಪರಿಣಾಮವಾಗಿ ಅಮೆರಿಕದಲ್ಲೂ ಲಾಕ್​ಡೌನ್​ ಜಾರಿ ಮಾಡಲಾಗಿತ್ತು. ನಂತರ ಕೂಡ ಕೆಲ ಚಟುವಟಿಕೆಗಳ ಆರಂಭವಾದರೂ ಜನ ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಇದೇ ರೀತಿ ವಿಲ್ ಸ್ಮಿತ್ ಕೂಡ ಕಳೆದ ಒಂದು ವರ್ಷದಿಂದ ಮನೆಯಲ್ಲೇ ಕಾಲ ಕಳೆದು ಸೇಫ್ ಔಟ್ ಆಗಿದ್ದಾರೆ. ವಿಲ್ ಸ್ಮಿತ್ ಅವರು ಸದಾ ಸಿಕ್ಸ್​ಪ್ಯಾಕ್​ ಮಾಡಿಕೊಂಡು ಖಡಕ್ ಮೈಕಟ್ಟು ಹೊಂದಿರುತ್ತಿದ್ದರು.

ಈ ಕುರಿತು ಇನ್ಸ್ಟಾಗ್ರಾಮ್​ನಲ್ಲಿ ಮನೆಯಲ್ಲಿ ಕೂತು ಕೂತು ಹೊಟ್ಟೆ ಬಂದಿದೆ. "I'm In The Worst Shape Of My Life" ಎಂದು ಬರೆದುಕೊಂಡಿದ್ದಾರೆ. ವಿಲ್ ಸ್ಮಿತ್ ಅವತಾರ ಕಂಡು ಅವರ ಅಭಿಮಾನಿಗಳು ಕೆಲವರು ಕಾಲೆಳದಿದ್ದರೇ, ಇನ್ನು ಕೆಲವರು ಇದು ವಿಲ್​ ಸ್ಮಿತ್ ಅವರೇನಾ ಎಂದು ನಂಬಲಾಗುತ್ತಿಲ್ಲ ಎಂದು ಕಾಮೆಂಟ್​ಗಳನ್ನು ಮಾಡಿದ್ದಾರೆ.

ಆಲಿ, ಪರ್ಸುಟ್ ಆಫ್ ದಿ ಹ್ಯಾಪಿನೆಸ್, ಮೆನ್ ಇನ್ ಬ್ಲಾಕ್ ಅಂತಹ ಸೂಪರ್ ಹಿಟ್​ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಈ 52 ವರ್ಷದ ನಟ ಇನ್ಸ್ಟಾಗ್ರಾಮ್​ನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net