ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

school
Published on

ನವದೆಹಲಿ: ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲಾ- ಕಾಲೇಜುಗಳನ್ನು ಪುನಾರಂಭಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕು ವ್ಯಾಪಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂಬುದು ಮನವರಿಕೆಯಾಗುವವರೆಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಎರಡು ತಿಂಗಳ ಹಿಂದೆ ಇದ್ದ ಪರಿಸ್ಥಿತಿಗೆ ಹೋಲಿಸಿದಲ್ಲಿ ಈಗ ಸುಧಾರಿಸಿದೆ. ಇದಕ್ಕೆ ಕಾರಣವಾದ ಕೇಂದ್ರ ಸರ್ಕಾರವೂ ಸೇರಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ಅವರು ಹೇಳಿದ್ದಾರೆ. ಕರೊನಾ ವಾರಿಯರ್ಸ್​, ವಿವಿಧ ಸಂಘ-ಸಂಸ್ಥೆಗಳು ಕೂಡ ಇದಕ್ಕೆ ಶ್ರಮ ವಹಿಸಿವೆ ಎಂದು ತಿಳಿಸಿದ್ದಾರೆ.

ಹಲವು ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು ಕೂಡ ಶಾಲೆಗಳನ್ನು ತೆರೆಯುವುದು ಬೇಡ ಎಂದೇ ಹೇಳಿದ್ದಾರೆ. ಜತೆಗೆ, ಮೆಸೇಜ್​ಗಳನ್ನು ಮಾಡುತ್ತಿದ್ದಾರೆ. ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆಗಳನ್ನು ತೆರೆಯುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

ಮಕ್ಕಳ ಬಗ್ಗೆ ಪಾಲಕರು ಎಷ್ಟು ಕಾಳಜಿ ಹೊಂದಿದ್ದಾರೋ ಅಷ್ಟೇ ಕಾಳಜಿಯನ್ನು ಸರ್ಕಾರ ಕೂಡ ಹೊಂದಿದೆ. ಹೀಗಾಘಿ ಪೂಣ್ ಮನವರಿಕೆಯಾಗುವವರೆಗೆ ಶಾಲೆಗಳನ್ನು ತೆರಯಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net