ಮತ್ತೆಂದು ಆರ್​ಜೆಡಿ-ಕಾಂಗ್ರೆಸ್ ಜೊತೆ ಹೋಗಲ್ಲ, ಎನ್​ಡಿಎನಲ್ಲೇ ಉಳಿಯುತ್ತೇನೆ; ಸಿಎಂ ನಿತೀಶ್ ಕುಮಾರ್| Nitish Kumar

Untitled design (33)
Published on

Nitish Kumar: ಕೆಲವೇ ತಿಂಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಕಾವು ಏರಿದ್ದು, ಇಂದು ಬಿಹಾರದ ಪೂರ್ಣಿಯಾ ಜಿಲ್ಲೆಗೆ ಪ್ರಧಾನಿ ನೀಡಿ ಹಲವು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿಗೆ ಭರವಸೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಇನ್ನೆಂದು ಆರ್​ಜೆಡಿ-ಕಾಂಗ್ರೆಸ್ ಜೊತೆ ಹೋಗಲ್ಲ. ಎನ್​ಡಿಎ ಜೊತೆಯಲ್ಲೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್, 2005ರ ನವೆಂಬರ್‌ನಲ್ಲಿ ಬಿಹಾರದಲ್ಲಿ ಮೊದಲ ಬಾರಿಗೆ ಬಿಜೆಪಿ-ಜೆಡಿಯು ಕೂಟ ಮೊದಲ ಸರ್ಕಾರ ರಚಿಸಿತು. ಒಂದು ಅಥವಾ ಎರಡು ಬಾರಿ, ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ನಾನು ಇನ್ನೊಂದು ಮೈತ್ರಿಗೆ ಜೊತೆ ಹೋಗಿದ್ದೆ. ಅದು ಹಿಂದಿನ ವಿಷಯ. ನಾನು ಆ ಜನರೊಂದಿಗೆ ಎಂದಿಗೂ ಆರಾಮವಾಗಿರಲು ಸಾಧ್ಯವಾಗಲಿಲ್ಲ. ನಾವು ಅಧಿಕಾರ ಹಂಚಿಕೊಂಡಾಗ ಅವರು ಯಾವಾಗಲೂ ಕಿಡಿಗೇಡಿತನದಲ್ಲಿ ತೊಡಗಿದ್ದರು. ಅದಕ್ಕೆ ನಾನು ಮರಳಿ ಎನ್​ಡಿಗೆ ಮರಳಿದೆ. ಇನ್ನು ಮುಂದೆ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ತಿಳಿಸಿದರು.

ಬಿಹಾರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ವರ್ಷದ ಬಜೆಟ್​ನಲ್ಲಿ ತೆಗೆದುಕೊಂಡ ಕ್ರಮಗಳಿಗಾಗಿ ಪ್ರಧಾನಿ ಮೋದಿಯನ್ನು ಸಿಎಂ ನಿತೀಶ್ ಕುಮಾರ್ ಶ್ಲಾಘಿಸಿದರು. 125 ಯೂನಿಟ್ ವಿದ್ಯುತ್ ಉಚಿತಗೊಳಿಸುವುದು. ಸಾಮಾಜಿಕ ಭದ್ರತಾ ಪಿಂಚಣಿಗಳ ಹೆಚ್ಚಳ ಸೇರಿದಂತೆ ತಮ್ಮ ಸರ್ಕಾರದ ಇತ್ತೀಚಿನ ಕ್ರಮಗಳ ಬಗ್ಗೆಯೂ ಮುಖ್ಯಮಂತ್ರಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ಹೊಗಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net