ಇಂಡಿಯಾ-ಪಾಕ್ ಕ್ರಿಕೆಟ್; ಯಾರಿಗೂ ಆಡಲು ಇಷ್ಟವಿರಲಿಲ್ಲ, ಬಿಸಿಸಿಐನಿಂದ ಬಲವಂತಪಡಿಸಲಾಯಿತು; ಸುರೇಶ್ ರೈನಾ| Suresh Raina

Untitled design (27)
Published on

Suresh Raina: ಏಷ್ಯಾ ಕಪ್-2025 ಕ್ರಿಕೆಟ್ ಟೂರ್ನಿಯಲ್ಲಿ ಭಾರತ-ಪಾಕ್​ ತಂಡದೊಂದಿಗೆ ಆಡಲು ಸಾಕಷ್ಟು ವಿರೋಧ ವ್ಯಕ್ತವಾದ್ರೂ, ಭಾನುವಾರ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಬ್ಯಾಟ್ ಮತ್ತು ಚೆಂಡಿನ ನಡುವಿನ ಸ್ಪರ್ಧೆಯನ್ನು ಹೊರತುಪಡಿಸಿ, ಎರಡೂ ತಂಡಗಳ ನಡುವೆ ಯಾವುದೇ ವಿನಿಮಯ ನಡೆಯಲಿಲ್ಲ. ಪಾಕ್​ ತಂಡದ ಆಟಗಾರರ ಕೈಯನ್ನು ಸಹ ಕುಲಕಲಿಲ್ಲ.

ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದ ಹಿನ್ನೆಲೆ ಭಾರತೀಯ ಆಟಗಾರರಿಗೂ ಪಾಕ್ ಜೊತೆ ಕ್ರಿಕೆಟ್ ಆಡಲು ಇಷ್ಟವಿರಲಿಲ್ಲ ಎನ್ನಲಾಗಿದೆ. ಬಿಸಿಸಿಐ ಒತ್ತಡದಿಂದ ಪಾಕ್ ತಂಡದ ಜೊತೆ ಆಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.

ಸ್ಪೋರ್ಟ್ಸ್​​ ಟಾಕ್ ಜೊತೆ ಮಾತನಾಡಿರುವ ಸುರೇಶ್ ರೈನಾ, ನನಗೆ ಗೊತ್ತಿರುವಂತೆ ಯಾವುದೇ ಆಟಗಾರರಿಗೆ ಏಷ್ಯಾ ಕಪ್​ನಲ್ಲಿ ಆಡಲು ಆಸಕ್ತಿ ಇರಲಿಲ್ಲ. ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದರಿಂದ, ಆಟಗಾರರಿಗೆ ಅದರ ನಿರ್ಣಯಕ್ಕೆ ಬದ್ಧರಾಗಿರುವುದು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದು ಹೇಳಿದ್ದಾರೆ.

ನೀವು ವೈಯಕ್ತಿಕವಾಗಿ ಟೀ ಇಂಡಿಯಾ ಆಟಗಾರರನ್ನು ಕೇಳಿದರೆ, ಅವರಲ್ಲಿ ಯಾರೂ ಏಷ್ಯಾ ಕಪ್ ಆಡಲು ಬಯಸುತ್ತಿರಲಿಲ್ಲ. ಪಾಕ್​ ಜೊತೆ ಅಟ ಆಡುವುದು ನನಗೂ ಬೇಸರ ತಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ಅವರ ಆಟಗಾರರನ್ನು ಪಾಕಿಸ್ತಾನದ ವಿರುದ್ಧ ಆಡುವ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ಕೇಳಿದ್ದರೆ, ಅವರು ಸಹ ಇಲ್ಲ ಎಂದು ಹೇಳುತ್ತಿದ್ದರು ಎಂದು ನಾನು ಹೇಳಬಲ್ಲೆ ಎಂದು ಹೇಳಿದ್ದಾರೆ.

ಭಾನುವಾರ ನಡೆದ ಇಂಡಿಯಾ-ಪಾಕ್ ಪಂದ್ಯಕ್ಕೂ ಮುನ್ನ ಭಾರಿ ವಿರೋಧ ವ್ಯಕ್ತವಾಗಿತ್ತು. ಎಕ್ಸ್​​ನಲ್ಲಿ ಬಾಯ್ಕಾಟ್ ಇಂಡಿಯಾ-ಪಾಕ್ ಮ್ಯಾಚ್ ಟ್ರೆಂಡಿಂಗ್​ನಲ್ಲಿತ್ತು. ಆದ್ಯಾಗ್ಯೂ, ಟೀಂ ಇಂಡಿಯಾ- ಪಾಕ್ ಜೊತೆ ಆಡಿದ್ದು, 7 ವಿಕೆಟ್​​ಗಳ ಅಂತರದಿಂದ ಗೆದ್ದು ಬೀಗಿದೆ. ಗೆಲುವನ್ನು ಪಹಲ್ಗಾಮ್​ನಲ್ಲಿ ಮೃತರಾದವರು ಕುಟುಂಬಗಳಿಗೆ ಅರ್ಪಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net