

* ಕಿರುವಾರ ಎಸ್.ಸುದರ್ಶನ್ ಕೋಲಾರ
ರಾಜ್ಯ ಬಜೆಟ್ ಮಂಡನೆಗೆ ಕೆಲವೇ ದಿನಗಳು ಬಾಕಿಯಿದ್ದು, ಚಿನ್ನದ ನಾಡು ಕೋಲಾರ ಜಿಲ್ಲೆಯ ಜನರ ನಿರೀೆಗಳು ಗರಿಗೆದರಿವೆ. ಮಾ.7ರಂದು ಸಿದ್ದರಾಮಯ್ಯ ಅವರು 16ನೇ ಬಜೆಟ್ ಮಂಡಿಸಲು ಸಿದ್ಧತೆ ಕೈಗೊಂಡಿದ್ದು, ಆಂಧ್ರ&ತಮಿಳುನಾಡು ಗಡಿಯಲ್ಲಿರುವ ಜಿಲ್ಲೆಯ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಪ್ಯಾಕೇಜ್ ನೀಡಲಿದ್ದಾರೆ ಎನ್ನುವುದನ್ನು ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದು, ಹಳೇ ಯೋಜನೆಗಳ ಮರುಪೂರಣದತ್ತಲೂ ಗಮನ ಹರಿಸಿದ್ದಾರೆ.
ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಕಾಂಗ್ರೆಸ್ನ ನಾಲ್ವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಸಿಎಂ, ಡಿಸಿಎಂ ಹಾಗೂ ಇತರ ಸಚಿವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದು, ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸುತ್ತಾರೆ ಎಂಬ ನಿರೀೆ ಹೆಚ್ಚಾಗಿದೆ.
ರಸ್ತೆ, ಚರಂಡಿ, ನೀರು, ಬೀದಿದೀಪ, ಯುಜಿಡಿ ಹೀಗೆ ಮೂಲ ಸೌಲಭ್ಯಗಳಿಗೆ ಬಜೆಟ್ ಸಿಮೀತಗೊಳ್ಳದೆ ಶಾಶ್ವತ ಯೋಜನೆ ಘೋಷಣೆ ಮಾಡುಬೇಕೆಂಬುದು ಜನರ ಒತ್ತಾಸೆಯಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕೋಲಾರ ಜಿಲ್ಲೆಯನ್ನು ಕಡೆಗಣಿಸಿಕೊಂಡು ಬಂದಿವೆ ಎಂಬ ಅಸಮಾಧಾನ ಇದೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ವೇಮಗಲ್&ಕುರಗಲ್ ಪಟ್ಟಣ ಪಂಚಾಯಿತಿ ಅಭಿವೃದ್ಧಿ, ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಪಡಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಅಧಿಕಾರಕ್ಕೆ ಬಂದು 2 ವರ್ಷ ಸಮೀಪಿಸುತ್ತಿದ್ದರೂ ಭರವಸೆಗಳನ್ನು ಈಡೇರಿಸಿಲ್ಲ. ಕೆಲ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಭೂಮಿಪೂಜೆ ಮಾಡಿದ್ದು, ಕಾಮಗಾರಿ ಗುಣಮಟ್ಟ ಕಾಪಾಡುವ ಜತೆಗೆ ವೇಗ ನೀಡಬೇಕಿದೆ.
ಶಿವರಾತ್ರಿ ಹಬ್ಬಕ್ಕೂ ಮುನ್ನವೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚಾಗುತ್ತಿದೆ. ಮುಂದಿನ ಏಪ್ರಿಲ್, ಮೇ, ಜೂನ್ನಲ್ಲೂ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಜಿಲ್ಲೆಗಳೆಂದು ಘೋಷಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
* ಈಡೇರುವುದೇ ಮಹಾನಗರ ಪಾಲಿಕೆ ಕನಸು
ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಇದಕ್ಕೆ ಪೂರಕವಾದ ಸಿದ್ಧತೆ ನಡೆಯುತ್ತಿವೆ. ನಗರ ಸಮೀಪದ ಕೊಂಡರಾಜನಹಳ್ಳಿ, ಅರಹಳ್ಳಿ, ಹೊನ್ನೇನಹಳ್ಳಿ, ವಡಗೂರು, ಛದ್ರಕೋಡಿಹಳ್ಳಿ ಗ್ರಾಪಂಗಳನ್ನು ನಗರಕ್ಕೆ ಸೇರಿಸಿಕೊಳ್ಳಲು ಸ್ಯಾಟಲೈಟ್ ಸರ್ವೇ ನಡೆಸಿ ವರದಿ ನೀಡುವಂತೆ ಪೌರಾಡಳಿತ ನಿರ್ದೇಶನಾಲಯವು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಇದಕ್ಕೆ ಬಜೆಟ್ ಅಧಿವೇಶನದಲ್ಲಿ ಮಂಜೂರಾತಿ ಸಿಗಬಹುದೇ ಎಂಬ ನಿರೀೆಯಿದೆ.
* ಎಪಿಎಂಸಿ ಜಾಗದ ಸಮಸ್ಯೆಗಿಲ್ಲ ಸ್ಪಂದನೆ
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಹೆಚ್ಚುವರಿ ಜಾಗ ಕಲ್ಪಿಸಬೇಕು ಎಂಬುದು ಶಾಶ್ವತ ಸಮಸ್ಯೆಯಾಗಿ ಉಳಿದಿದೆ. ಸೂಕ್ತ ಜಾಗ ನೀಡಬೇಕು ಎಂದು ತಾಲೂಕಿನ ಚಲುವನಹಳ್ಳಿ ಬಳಿ ಜಾಗ ಗುರುತಿಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಸರ್ಕಾರವು ಈಗ ಆಗ ಜಾಗವನ್ನು ತಿರಸ್ಕರಿಸಿದೆ. ಇದರಿಂದಾಗಿ ಮಾರುಕಟ್ಟೆಗೆ ಸರ್ಕಾರ ಜಾಗ ನೀಡುವುದಿಲ್ಲ ಎಂಬ ಭಾವನೆ ರೈತರಲ್ಲಿ, ಟೊಮ್ಯಾಟೊ, ತರಕಾರಿ ಮಂಡಿ ಮಾಲೀಕರಲ್ಲಿದೆ. ಮಾರುಕಟ್ಟೆ ಕೊರತೆಯಿಂದ ರೈತರು ವ್ಯವಸಾಯದಿಂದ ದೂರ ಸರಿಯುಂತಾಗಿದೆ.
* 3ನೇ ಶುದ್ಧೀಕರಣ ಮಾಡಿ ಹರಿಸಿ
ಸರ್ಕಾರ ಕೆಸಿ ವ್ಯಾಲಿ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿತ್ತು. ಆದರೆ ಎರಡು ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸುತ್ತಿರುವುದನ್ನು ಮೂರನೇ ಹಂತದಲ್ಲೂ ಶುದ್ಧೀಕರಣ ಮಾಡಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಸರ್ಕಾರಗಳು ಕ್ರಮವಹಿಸಲಿಲ್ಲ, ಈಗಲಾದರೂ 2ನೇ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಮೂರನೇ ಹಂತಕ್ಕೆ ಕೈ ಹಾಕಲು ವಿವಿಧ ಸಂಸಂಸ್ಥೆಗಳು ಒತ್ತಾಯಿಸಿವೆ.
* ಪಟ್ಟಣ ಪಂಚಾಯಿತಿಯನ್ನಾಗಿಸಲು ಒತ್ತಾಯ
ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ, ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಪಂ ಕೇಂದ್ರಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಆಯಾ ಕ್ಷೇತ್ರದ ಶಾಸಕರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
* ಕೈಗಾರಿಕಾ ವಸಾಹತುಗೆ ಸಹಕಾರ ಅಗತ್ಯ
ಮಾಲೂರು, ನರಾಸಪುರ, ವೇಮಗಲ್ ಭಾಗದಲ್ಲಿ ಈಗಾಗಲೇ ಕೈಗಾರಿಕೆಗಳು ಸ್ಥಾಪನೆಯಾಗಿದ್ದು, ಮುಳಬಾಗಿಲು, ಶ್ರೀನಿವಾಸಪುರ ಭಾಗದಲ್ಲೂ ಕೈಗಾರಿಕೆಗಳ ಸ್ಥಾಪನೆ ಮಾಡಬೇಕು. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಕೈಗಾರಿಕಾ ವಸಾಹತು ನಿರ್ಮಿಸಲು ಸರ್ಕಾರದ ಸಹಕಾರ ಅಗತ್ಯ.
* ಸರ್ಕಾರಿ ಮೆಡಿಕಲ್ ಮಂಜೂರಿಗೆ ಒತ್ತಾಯ
ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಹಾಗೂ ಕೃಷಿ ಕಾಲೇಜು ಮಂಜೂರು ಮಾಡಬೇಕು ಎಂಬ ಕೂಗು ಎದ್ದಿದ್ದು, ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಬಜೆಟ್ನಲ್ಲಿ ಘೋಷಣೆ ಮಾಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್...
ಕೋಲಾರ ಜಿಲ್ಲೆಗೆ ಮೆಡಿಕಲ್ ಕಾಲೇಜು, ರಿಂಗ್ ರೋಡ್, ಎತ್ತಿನ ಹೊಳೆ ಯೋಜನೆ, ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು, ಎಪಿಎಂಸಿಗೆ ಜಾಗ ಕಲ್ಪಿಸುವ ಸಂಬಂಧ ಈಗಾಗಲೇ ಶಾಸಕ ಕೊತ್ತೂರು ಮಂಜುನಾಥ್, ನಾನು ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ. ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುತ್ತಾರೆ ಎಂಬ ನಿರೀೆಯಲ್ಲಿದ್ದೇವೆ.
* ಎಂ.ಎಲ್.ಅನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ, ಕೋಲಾರ.
ಕೋಟ್...
ಕೋಲಾರವನ್ನು ಸ್ವಾವಲಂಬಿ ಜಿಲ್ಲೆಯನ್ನಾಗಿಸಲು ರಾಜ್ಯ ಸರ್ಕಾರವು ಬಜೆಟ್ನಲ್ಲಿ ಆದ್ಯತೆ ಮೇರೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎಪಿಎಂಸಿಗೆ ಹೆಚ್ಚುವರಿ ಜಾಗ ಕಲ್ಪಿಸಲು ಕ್ರಮಕೈಗೊಳ್ಳಬೇಕು.
* ಸಿಎಂಆರ್ ಶ್ರೀನಾಥ್, ಮಂಡಿ ಮಾಲೀಕ, ಕೋಲಾರ
ಪ್ರಮುಖ ಬೇಡಿಕೆಗಳು...
1. ಕೃಷಿ ಮತ್ತು ತೋಟಗರಿಕಾ ಉತ್ಪನ್ನಗಳ ಸಂಸ್ಕರಣ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕ ಟಕ ಸ್ಥಾಪಿಸಬೇಕು.
2. ಬೃಹತ್ ುಡ್ ಪಾರ್ಕಗಳನ್ನು ಸ್ಥಾಪಿಸುವ ಮೂಲಕ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರ್ತು ಮಾಡಲು ಅವಕಾಶ ಕಲ್ಪಿಸಬೇಕು.
3. ಜಿಲ್ಲಾಸ್ಪತ್ರೆಗೆ ಅತ್ಯಾಧುನಿಕ ಸಲಕಣೆಗಳನ್ನು ಒದಗಿಸಬೇಕು.
4. ಹೈನೋದ್ಯಮಕ್ಕೆ ಉತ್ತೇಜನ ನೀಡಲು ಪಶು ವೈದ್ಯಕಿಯ ಕಾಲೇಜು ಮಂಜೂರು.
5. ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವುದು.