ಡಿಪ್ಲೊಮಾ ವಿದ್ಯಾರ್ಥಿಗಳನ್ನೂ ಪಾಸ್ ಮಾಡ್ತಾರಾ?

Karnataka Technical education board
Published on

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲು ಮಾರ್ಗಸೂಚಿ ಹಾಗೂ ಸೆಮಿಸ್ಟರ್​ಗಳ ಪರೀಕ್ಷಾ ದಿನಾಂಕವನ್ನು ತಾಂತ್ರಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

2019-20ರ ಸಾಲಿನ 6ನೇ ಸೆಮಿಸ್ಟರ್ ಡಿಪ್ಲೊಮಾ ಪರೀಕ್ಷೆ ಮತ್ತು ಎಲ್ಲ ಸೆಮಿಸ್ಟರ್ ಬ್ಯಾಕ್​ಲಾಗ್ ಪರೀಕ್ಷೆಗಳನ್ನು ಸೆ.7ರಿಂದ 28ರ ಅವಧಿಯಲ್ಲಿ ಹಾಗೂ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು 3 ಮತ್ತು 5ನೇ ಸೆಮಿಸ್ಟರ್ ತೇರ್ಗಡೆ ಮಾಡಲು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿ ವಿಷಯ ಬಾಕಿ ಉಳಿಸಿಕೊಂಡಿದ್ದರೆ ಮತ್ತೆ ಪರೀಕ್ಷೆ ಬರೆಯಬೇಕು. ತೇರ್ಗಡೆ ಮಾಡಬೇಕಾದರೆ ಅ ವಿದ್ಯಾರ್ಥಿ ಕಳೆದ ಸೆಮಿಸ್ಟರ್​ಲ್ಲಿ ಪಡೆದಿರುವ ಅಂಕಗಳಲ್ಲಿ ಶೇ.50 ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಯು ಹಿಂದಿನ ಸೆಮಿಸ್ಟರ್​ನಲ್ಲಿ ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೂ ತೇರ್ಗಡೆಯಾಗಿರುವ ವಿಷಯ ಮಾತ್ರ ಪರಿಗಣಿಸಿ ಸರಾಸರಿ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಅಂಕಗಳನ್ನು ನಿಗದಿಪಡಿಸಿ ಮುಂದಿನ ಸೆಮಿಸ್ಟರ್​ಗೆ ತೇರ್ಗಡೆ ಮಾಡಲಾಗುತ್ತದೆ.

ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬೇರೆ ರೀತಿಯಲ್ಲಿ ಅಂಕಗಳ ನಿರ್ಧಾರ ಮಾಡಲಾಗಿದೆ. 3ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಿರು ಪರೀಕ್ಷೆ ನಡೆಸಿ ಆಂತರಿಕ ಮೌಲ್ಯಾಂಕನ ಪಡೆಯಲು ಇಲಾಖೆ ತೀರ್ವನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net