ಅಕ್ಷಯ್ ಕುಮಾರ್ ‘ಹನುಮಾನ್ ಅಂಶ್ 2’ನಲ್ಲಿ ನಟಿಸ್ತಾರಾ? ನಿರ್ಮಾಪಕಿ ಹೇಳಿದ್ದೇನು? | Akshay Kumar

ಹನುಮಾನ್ ಅಂಶ್ 2 ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿಗೆ ನಿರ್ಮಾಪಕಿ ಅನುಪ್ರಿಯಾ ನಾಗರ್ ಸ್ಪಷ್ಟನೆ ನೀಡಿದ್ದಾರೆ. ಅಕ್ಷಯ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ
Akshay Kumar in Hanuman Ansh 2
ಹನುಮಾನ್ ಅಂಶ್ 2ರಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಎಂಬ ಸುದ್ದಿಗೆ ನಿರ್ಮಾಪಕಿ ಸ್ಪಷ್ಟನೆ
Published on: 

Hanuman Ansh 2: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಹನುಮಾನ್ ಅಂಶ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸದ್ದು ಮಾಡಿತ್ತು. ಈ ಬಗ್ಗೆ ಇದೀಗ ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಾಗರ್ ಸ್ಪಷ್ಟನೆ ನೀಡಿದ್ದಾರೆ. ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಇರಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅನುಪ್ರಿಯಾ ನಾಗರ್, ಅಕ್ಷಯ್ ಕುಮಾರ್ ತಮ್ಮ ‘ನೆಚ್ಚಿನ ನಟ’ ಎಂದು ಹೇಳಿಕೊಂಡಿದ್ದರು. ಇದೇ ವೇಳೆ, ‘ಹನುಮಾನ್ ಅಂಶ್’ ಚಿತ್ರದ ಎರಡನೇ ಭಾಗದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರಾ ಎಂದು ಕೇಳಿದಾಗ, ‘ವೋ ಮಹಾರಾಜ್ ಜೀ ಬತಾಯೇಂಗೆ’ ಎಂದು ಉತ್ತರಿಸಿದ್ದರು. ಅನುಪ್ರಿಯಾ ಅವರ ಈ ಹೇಳಿಕೆ ವೈರಲ್ ಆಗುತ್ತು.

ಅಕ್ಷಯ್ ನಟಿಸುತ್ತಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ

ಈಗ ತಮ್ಮ ಹಿಂದಿನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅನುಪ್ರಿಯಾ ನಾಗರ್, ‘ಹನುಮಾನ್ ಅಂಶ್ 2’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂದು ತಾವು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾರೆ. ‘ಹಿಂದೂಸ್ತಾನ್ ಟೈಮ್ಸ್’ ಜೊತೆ ಮಾತನಾಡಿದ ಅವರು, “ಪಾರ್ಟ್ 2ರಲ್ಲಿ ಅಕ್ಷಯ್ ಕುಮಾರ್ ಬಗ್ಗೆ ನಾನು ಏನೂ ಹೇಳಿಲ್ಲ. ಅದು ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರಿಯಲಿದೆ ‘ಹನುಮಾನ್ ಅಂಶ್’ ಕಥೆ

ಅಕ್ಷಯ್ ಕುಮಾರ್ ನಟನೆಯ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ‘ಹನುಮಾನ್ ಅಂಶ್ 2’ ಚಿತ್ರದ ಕೆಲಸಗಳು ನಡೆಯುತ್ತಿವೆ. ನಿರ್ದೇಶಕ ವಿಶಾಲ್ ಚತುರ್ವೇದಿ ಕೂಡ ಚಿತ್ರದ ಎರಡನೇ ಭಾಗವನ್ನು ಖಚಿತಪಡಿಸಿದ್ದಾರೆ. ಹನುಮಾನ್ ಅಂಶ್ ಕಥೆಯನ್ನು ಮೂರು ಭಾಗಗಳಲ್ಲಿ ತೆರೆಗೆ ತರುವ ಯೋಜನೆ ಚಿತ್ರತಂಡಕ್ಕಿದೆ.

ಇದನ್ನೂ ಓದಿ: ಶೂಟ್‌ಆಫ್‌ನಲ್ಲಿ ದಕ್ಷಿಣ ಕೊರಿಯಾಗೆ ಶಾಕ್: ಸಾಹಿಲ್–ಚಿಕಿತಾ ಜೋಡಿ ಮೋಡಿ; ಭಾರತಕ್ಕೆ 8ನೇ ಬಂಗಾರ, ಒಲಿಂಪಿಕ್ಸ್​ಗೆ ಎಂಟ್ರಿ! Asian Games

ಆಧ್ಯಾತ್ಮಿಕ ಹಿನ್ನೆಲೆಯ ‘ಹನುಮಾನ್ ಅಂಶ್’ ಸರಣಿ, ಸೀಮಿತ ಬಜೆಟ್‌ನಲ್ಲೇ ಮೊದಲ ಭಾಗದ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೀಗಾಗಿ ಎರಡನೇ ಭಾಗದ ಬಗ್ಗೆ ಸಿನಿಪ್ರೇಕ್ಷಕರ ಕುತೂಹಲವೂ ಹೆಚ್ಚಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net