

ಅಮೆರಿಕಾ: ಕೀನ್ಯಾ ದೇಶ ತನ್ನ ದೇಶದಲ್ಲಿದ್ದ ಸುಮಾರು 10 ಲಕ್ಷ ಭಾರತೀಯ ಮೂಲದ ಕಾಗೆಗಳನ್ನು ಕೊಲ್ಲುವುದಾಗಿ ಘೋಷಿಸಿತ್ತು. ಇದೀಗ ಅಮೆರಿಕ ದೇಶ ಗೂಬೆಗಳನ್ನು ಕೊಲ್ಲುವುದಾಗಿ ನಿರ್ಧಿರಿಸಿದೆ.
ಗೂಬೆಗಳು ತಮ್ಮ ಸಂತತಿಯ ಸಹೋದರ ಸಂಬಂಧಿಗಳಾದ ಪುಟಾಣಿ ಗೂಬೆಗಳ ಸಂತತಿಗೆ ಮಾರಕವಾಗಿ ಪರಿಣಮಿಸಿವೆ. ಮಚ್ಚೆ ಹೊಂದಿರುವ ಗೂಬೆಗಳ ಸಂತತಿಗೆ ಮಾರಕವಾಗಿ ಪರಿಣಮಿಸಿವೆ. ಹೀಗಾಗಿ, ಮಚ್ಚೆ ಹೊಂದಿರುವ ಪುಟಾಣಿ ಗೂಬೆಗಳ ಸಂತತಿ ರಕ್ಷಿಸುವ ಸಲುವಾಗಿ ದೊಡ್ಡ ಗೂಬೆಗಳ ಸಂತತಿಯನ್ನ ಕಡಿಮೆ ಮಾಡಲು ಅಮೆರಿಕದ ವನ್ಯ ಜೀವಿ ಅಧಿಕಾರಿಗಳು ಮುಂದಾಗಿದ್ದಾರೆ.
ಬುಧವಾರ ಬಿಡುಗಡೆಯಾದ US ವನ್ಯಜೀವಿ ಸೇವಾ ಕಾರ್ಯತಂತ್ರವು ಒರೆಗಾನ್, ವಾಷಿಂಗ್ಟನ್ ರಾಜ್ಯ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕಾರಣ ‘ಬಾರ್ಡ್’ ಗೂಬೆಗಳು ಹೆಚ್ಚಿದ ಪರಿಣಾಮ ‘ಸ್ಟಾಟೆಡ್ ಗೂಬೆ’ಗಳು spotted owls ಕೊನೆಯ ಕಾಲಘಟ್ಟದಲ್ಲಿವೆ. ಹಾಗಾಗಿ ಅವುಗಳನ್ನು ಉಳಿಸಲು ಸರ್ಕಾರ ಚಿಂತಿಸಿದೆ.
ಈ ಕಾರಣಕ್ಕಾಗಿ ಸದ್ಯ ಸಂತತಿ ಹೆಚ್ಚಿರುವ ‘ಬಾರ್ಡ್’ ಗೂಬೆಗಳು ಹೊಡೆದುರುಳಿಸಿ ಮತ್ತು ಅಳಿವಿನಂಚಿನಲ್ಲಿರುವ ಗೂಬೆಗಳನ್ನು ಉಳಿಸಲು ಯೋಚಿಸಿದೆ. ಇದಕ್ಕೆಂದೇ ವೃತ್ತಿಪರ ಶೂಟರ್ಗಳ ಸಹಾಯ ಪಡೆಯುವ ಮೂಲಕ ‘ಬಾರ್ಡ್’ ಗೂಬೆಗಳನ್ನು ಕೊಲ್ಲಲು ಮುಂದಾಗಿದ್ದಾರೆ.ಸುಮಾರು 4 ಲಕ್ಷ 50 ಸಾವಿರ ಗೂಬೆಗಳನ್ನು ಸಾಯಿಸಲು ಪ್ಲಾನ್ ಮಾಡಿದೆ.
‘ಸ್ಪಾಟೆಡ್ ಗೂಬೆ’ಗಳು ಮಚ್ಚೆಯುಳ್ಳ ಗೂಬೆಗಳಾಗಿದ್ದು, ‘ಬಾರ್ಡ್’ ಗೂಬೆಗಳಿಂದಾಗಿ ಈ ಜಾತಿ ಅಳಿವಿನ ಅಂಚಿನತ್ತ ಸಾಗಿವೆ. ಮತ್ತೊಂದೆಡೆ ಬಾರ್ಡ್ ಗೂಬೆಗಳು ಪೂರ್ವ ಯುನೈಟೆಡ್ ಸ್ಟೇಟ್ಸ್ ನ ಮೂಲದ್ದಾಗಿದ್ದು, ಈಗ ‘ಸ್ಪಾಟೆಡ್ ಗೂಬೆ’ಗಳು ಜಾತಿಗಳನ್ನು ಸ್ವಾಧೀನಪಡಿಸಿಕೊಂಡಿವೆ. ಗೂಬೆಗಳನ್ನು ಕೊಲ್ಲಲು ತರಬೇತಿ ಪಡೆದ ಶೂಟರ್‌ಗಳನ್ನು ನಿಯೋಜಿಸಲು ವಿವಾದಾತ್ಮಕ ಯೋಜನೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.