

ಹಾವೇರಿ; ಮೃತ ಪತಿಯ ಅಂತ್ಯಕ್ರಿಯೆ ವೇಳೆಗೆ ಹೃದಯಾಘಾತ ಸಂಭವಿಸಿ, ಪತ್ನಿಯು ಕೂಡ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ವೀರಬಸಪ್ಪ ಮತ್ತು ಬಸಮ್ಮ ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ. ಬೆಳಗ್ಗೆ 7:30 ರ ಹೊತ್ತಿಗೆ ಅನಾರೋಗ್ಯದಿಂದ ವೀರಬಸಪ್ಪ ಮೃತಪಟ್ಟಿದ್ದರು. ಮೃತ ವೀರಬಸಪ್ಪ ಅಂತ್ಯಕ್ರಿಯೆಗಾಗಿ ಪತ್ನಿ ಬಸಮ್ಮ ಸ್ಮಶಾನಕ್ಕೆ ತೆರಳಿದ್ದರು. ಈ ವೇಳೆ ಸಂಜೆ 4:10 ರ ಹೊತ್ತಿಗೆ ಬಸಮ್ಮಳಿಗೆ ಹೃದಯಾಘಾತ ಸಂಭವಿಸಿದೆ. ಪತಿ ಅಂತ್ಯಕ್ರಿಯೆಯ ಕೊನೆ ಘಳಿಗೆಯಲ್ಲಿ ಬಸಮ್ಮ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ. ಇನ್ನೂ ಈ ದಂಪತಿ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.