

Honeymoon: ಮದುವೆಯಾಗಿ ಹನಿಮೂನ್ ಬಳಿಕ ತನ್ನ ಗಂಡನಿಗೆ ಊಟದಲ್ಲಿ ವಿಷ ಹಾಕಿ ಕೊಂದ ಪರಾರಿಯಾಗಿದ್ದ ಪತ್ನಿಗೆ 9 ವರ್ಷಗಳ ನಂತರ ಇದೀಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೌದು, ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಪತಿಯ ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸಾಬೀತಾಗಿರುವ ಪತ್ನಿ ತಾರಾ ಅಲಿಯಾಸ್ ರುಬಿನಾಗೆ 2016ರ ಮಾರ್ಚ್ 24ರಂದು ನಡೆದ ಘಟನೆಯ ಸಾಕ್ಷ್ಯಗಳು ಮತ್ತು ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಲಯವು ಬುಧವಾರ(ಮೇ.14) ಈ ತೀರ್ಪು ನೀಡಿದೆ.
ಉತ್ತರಖಂಡದ ಉದಮ್ ಸಿಂಗ್ ಜಿಲ್ಲೆಯ ಕುಂದ ಪೊಲೀಸ್ ಠಾಣೆಯ ವ್ಯಾಪ್ತಿಯ ಬೈಲ್ ಗ್ರಾಮ ನಿವಾಸಿ ತಾರಾ ಅಲಿಯಾಸ್ ರುಬಿನಾ ಹಾಗೂ ಆಗ್ರಾದ ನಿವಾಸಿ ನಿರ್ಮಲ್ ಸಿಂಗ್ ಅವರನ್ನು ವಿವಾಹವಾದರು. ಮದುವೆ ನಂತರ ಮನೆಯಲ್ಲಿ ವಿವಾಹದ ವಾತಾವರಣ ಇತ್ತು. ಆದ್ರೆ ರುಬಿನಾ ಹನಿಮೂನ್ ಆದ ಒಂದು ದಿನದ ಬಳಿಕ ಗಂಡನ ಊಟದಲ್ಲಿ ವಿಷ ಹಾಕಿ ಕೊಂದಿದ್ದಾಳೆ. ಅಲ್ಲದೆ, ಅಲ್ಲಿಂದ ನಗದು ಮತ್ತು ಆಭರಣಗಳೊಂದಿಗೆ ಮನೆಯಿಂದ ಪರಾರಿಯಾಗಿದ್ದಾಳೆ.
ಮೃತ ನಿರ್ಮಲ್ ಸಿಂಗ್ ಸಹೋದರ ವಿಶೇಷ್ ಸಿಂಗ್ ನೀಡಿದ ದೂರಿನ ಮೇರಿಗೆ ಆಕೆ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ಆರೋಪಿ ರುಬಿನಾ ಅಲಿಯಾಸ್ ತಾರಾಳನ್ನು ಉತ್ತರಾಖಂಡದಿಂದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯ ಸಮಯದಲ್ಲಿ, ರುಬೀನಾ ಅಲಿಯಾಸ್ ತಾರಾ ತಾನು ಈಗಾಗಲೇ ಮದುವೆಯಾಗಿರುವುದಾಗಿ ಬಹಿರಂಗಪಡಿಸಿದ್ದಾಳೆ. ಅವಿವಾಹಿತ ವಯಸ್ಸಾದವರನ್ನು ಬಲೆಗೆ ಬೀಳಿಸಿ ಮದುವೆ ಮಾಡುವುದು ಅವಳ ವ್ಯವಹಾರವಾಗಿತ್ತು. ಮದುವೆಯಾದ ನಂತರ, ಅವಕಾಶ ಸಿಕ್ಕಾಗಲೆಲ್ಲಾ, ಅವಳು ತನ್ನ ಅತ್ತೆಯ ಮನೆಯಿಂದ ನಗದು ಮತ್ತು ಆಭರಣಗಳನ್ನು ಕದ್ದು ತೆಗೆದುಕೊಂಡು ಪಾರಾರಿಯಾಗುತ್ತಿದ್ದರು. ಇದೀಗ ಇವಳ ಕೃತ್ಯ 9 ವರ್ಷಗಳ ಬಳಿಕ ಸಾಬಿತಾಗಿದ್ದು, ಕೋರ್ಟ್ ಶಿಕ್ಷೆ ನೀಡಿದೆ.(ಏಜೆನ್ಸೀಸ್)