ಗಂಡ ಭೇಟಿಯಾಗಲು ಬರಲಿಲ್ಲವೆಂದು ಒಂಟಿತನದಿಂದ ನೊಂದು ನೇಣಿಗೆ ಶರಣಾದ ಪತ್ನಿ

suicide_web
Published on

ಕೊಯಮತ್ತೂರು: ಗಂಡ ತನ್ನನ್ನು ಭೇಟಿಯಾಗಲು ಬರಲಿಲ್ಲವೆಂದು ನೊಂದ ಮಹಿಳೆಯೊಬ್ಬಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸೂಳೂರು ಬ್ಲಾಕ್ ಗ್ರಾಮದಲ್ಲಿ ಆಗಸ್ಟ್ 18 ರಂದು ನಡೆದಿದೆ.

ಆತ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಸಿಬ್ಬಂದಿ. ನಾಗಾಲ್ಯಾಂಡ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಹೆಂಡತಿ ಸಂಗೀತಾ ಮೃತಪಟ್ಟವಳು.

2017ರಲ್ಲಿ ಸಿಆರ್​ಪಿಎಫ್ ಪೇದೆ ರಾಜ್​​ಕುಮಾರ್ ಚೆನ್ನೈನಲ್ಲಿ ಕೆಲಸಮಾಡುತ್ತಿದ್ದಾಗ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಅದೇ ವರ್ಷ ಅವರಿಬ್ಬರೂ ಮದುವೆಯಾದರೂ. ಸೂಳುರು ಪಟ್ಟಣ ಸಮೀಪ ಮುಥುಗೌಂಡೆನ್​ಪುರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಮೇಲೆ ವರ್ಗಾವಣೆಗೊಂಡ ಆತ ಆಕೆಯನ್ನು ಅಲ್ಲೇ ಬಿಟ್ಟು ನಾಗಾಲ್ಯಾಂಡ್ ಗೆ ಹೋದ.

ಏತನ್ಮಧ್ಯೆ ಜನವರಿಯಲ್ಲಿ 20 ದಿನ ರಜೆ ಪಡೆದು ಪತ್ನಿ ಬಳಿ ಬಂದಿದ್ದ. ಆತ ವಾಪಸ್ ನಾಗಾಲ್ಯಾಂಡ್​ಗೆ ತೆರಳಿದಾಗ ಪತಿ, ಪತ್ಮಿ ಇಬ್ಬರೂ ಫೋನ್, ವಿಡಿಯೋ ಕಾಲ್​ ಮೂಲಕ ಸಂಪರ್ಕದಲ್ಲಿದ್ದರು. ಲಾಕ್ ಡೌನ್ ಜಾರಿಯಾದ ನಂತರ ಕೆಲ ದಿನಗಳ ಕಾಲ ಊರಿಗೆ ಬರಬೇಕೆಂದು ಆತನಿಗೆ ಹೇಳಿದಳು. ಆದರೆ ಕರೊನಾ ವೈರಸ್ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಸಿಬ್ಬಂದಿಗೆ ರಜೆ ನೀಡುವುದಿಲ್ಲ ಎಂದು ಆತ ಪರಿಸ್ಥಿತಿ ಕುರಿತು ಆಕೆಗೆ ವಿವರಿಸಿದ್ದಾನೆ.

ಇದರಿಂದ ತೀವ್ರ ನೊಂದ ಆಕೆ ಆಗಸ್ಟ್ 18 ರಂದು ಆಕೆ ಆತನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತ ತಾನು ಏಕತಾನತೆಯಿಂದ, ಒಬ್ಬಂಟಿತನದಿಂದ ಬಳಲುತ್ತಿದ್ದು, ಕೆಲ ದಿನಗಳ ಕಾಲ ಆತ ಬರಬೇಕೆಂದು ಪುನಃ ವಿನಂತಿಸಿ ಕೊಂಡಿದ್ದಾಳೆ. ಆದರೆ ಆತ ತನ್ನ ಅಸಹಾಯಕ ಪರಿಸ್ಥಿತಿ ಕುರಿತು ಹೇಳಿಕೊಂಡಾಗಲೂ ಆಕೆ ತನ್ನ ಬದುಕು ಕೊನೆಗೊಳಿಸಿಕೊಳ್ಳುವುದಾಗಿ ಹೇಳಿ ಫೋನ್ ಸಂಪರ್ಕ ಕಡಿತಗೊಳಿಸಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net