ಗಂಡನನ್ನು ಕೊಂದು ಡೋರ್​ ಡೆಲಿವರಿ ಮಾಡಿದ ಪತ್ನಿ! Wife Kills Husband

Untitled design (60)
Published on

Wife kills husband ಮಹಿಳೆಯೊಬ್ಬಳು ತನ್ನ ತಮ್ಮನೊಂದಿಗೆ ಸೇರಿ ಗಂಡನನ್ನು ಕೊಂದು ಮೃತದೇಹವನ್ನು ಡೋರ್​ ಡೆಲಿವರಿ ಮಾಡಿದ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ನಂದ್ಯಾಲ್‌ನ ನೂನೆಪಲ್ಲೆಯ ನಿವಾಸಿ ರಾಮಣಯ್ಯ (50) ಮೃತ. ಕೊಲೆ ಆರೋಪದಡಿಯಲ್ಲಿ ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಇಬ್ಬರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಏನು?

ರಮಣಯ್ಯ 20 ವರ್ಷಗಳಿಂದೆ ಪಿಡುಗುರಲ್ಲದ ರಮಣಮ್ಮ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗಳಿಗೆ ಜ್ಯೋತಿ, ಚಂದನ ಮತ್ತು ಸಾಯಿ ಮೂವರು ಮಕ್ಕಳಿದ್ದಾರೆ. ಕೆಲ ವರ್ಷಗಳಿಂದ ದಂಪತಿಗಳ ನಡುವೆ ಮನಸ್ತಾಪವಾಗಿದೆ. ಇದರಿಂದ ಆಕೆಯ ತವರುಮನೆ ಪಿಡುಗುರಲ್ಲ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾಳೆ. ಆಕೆಯನ್ನು ಕರೆ ತರಲು ಮಂಗಳವಾರ ಪಿಡುಗುರಲ್ಲ ಗ್ರಾಮಕ್ಕೆ ತೆರಳಿದ್ದಾನೆ.

ಆಕೆಯ ಮನೆಗೆ ತೆರಳಿದ ರಮಣಯ್ಯ ಮತ್ತು ರಮಣಮ್ಮ ಕಟುಂಬದ ಸದಸ್ಯರ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಆತ ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತ ದೇಹವನ್ನು ರಮಣಯ್ಯ ಅವರ ಮನೆ ಮುಂದೆ ಹಾಕಿ ಪರಾರಿಯಾಗಿದ್ದಾರೆ. ಕೊನೆಗೆ ಮನೆಗೆ ಬಂದ ರಮಣಮ್ಮನ್ನನ್ನು ನೋಡಿ ಭಯಗೊಂಡ ಮಕ್ಕಳು ಪೊಲೀಸ್​ ದೂರು ನೀಡಿವೆ. ಬಳಿಕ ಬಂಧಿಸಿದ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿದ್ದು, ಕೊಲೆ ತಪ್ಪೊಪ್ಪಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net