

ಉತ್ತರ ಪ್ರದೇಶ: ತನ್ನ ಪತಿ ಕಳೆದ ಐದು ದಿನಗಳಿಂದ ಬೇರೊಬ್ಬ ಮಹಿಳೆಯೊಂದಿಗೆ ವಾಸಿಸುತ್ತಿರುವುದನ್ನು ಕಂಡು ಮಹಿಳೆಯೊಬ್ಬರು ಪೋಷಕರ ಜತೆಗೆ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಮಡದಿ ಊರಿಗೆ ಹೋದ ವೇಳೆ ಅನ್ಯ ಸ್ತ್ರೀಯೊಂದಿಗೆ ವಾಸವಾಗಿದ್ದನು. ಐದು ದಿನಗಳಿಂದ ತನ್ನ ಮನೆಯಲ್ಲಿ ಪರಸ್ತ್ರೀಯೊಬ್ಬಳು ಪತಿಯೊಂದಿಗೆ ವಾಸಿಸುತ್ತಿದ್ದಾಳೆ ಎಂದು ಅರಿತ ಪತ್ನಿ ತನ್ನ ಸಹೋದರರನ್ನು ಕರೆದುಕೊಂಡು ಮನೆಗೆ ಬಂದಿದ್ದಾಳೆ. ಈ ವೇಳೆ ಪತ್ನಿ ಹಾಗೂ ಆಕೆಯ ಸಹೋದರರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನು ನೋಡಿದ ಆತನ ಭಾಮೈದನರು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ರಾಜಿ ಪಂಚಾಯಿತಿ ಮಾಡಲಾಗಿದ್ದು, ತಾನು ಇನ್ನೆಂದೂ ಆ ಮಹಿಳೆಯೊಂದಿಗೆ ಸೇರುವುದಿಲ್ಲವೆಂದು ಮಾತು ಕೊಟ್ಟ ಬಳಿಕ ಆತನೊಂದಿಗೆ ಸಂಸಾರ ಮುಂದುವರೆಸಿಕೊಂಡು ಹೋಗಲು ಮಡದಿ ಒಪ್ಪಿದ್ದಾಳೆ.