ಭೀಮನ ಅಮವಾಸ್ಯೆಯಂದು ಪತಿ ಕಾಲು ಪೂಜೆ ಮಾಡಿದ್ದ ಪತ್ನಿ ಅನುಮಾನಾಸ್ಪದ ಸಾವು..! | Wife dies

Untitled design (66)
Published on

ನೆಲಮಂಗಲ: ಭೀಮನ ಅಮವಾಸ್ಯೆ ಹಿನ್ನೆಲೆ ನೆನ್ನೆ (ಜು.25) ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ(Wife dies) ಘಟನೆ ನೆಲಮಂಗಲದ ಅಂಚೆಪಾಳ್ಯ ಗ್ರಾಮದಲ್ಲಿ ನಡೆದಿದೆ.

24 ವರ್ಷದ ಸ್ಪಂದನಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯ ಶವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸಾವಿನ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

2004ರಲ್ಲಿ ಸ್ಪಂದನಾ ಕಾಲೇಜಿಗೆ ಹೋಗ್ತಿರೋ ಸಮಯದಲ್ಲೇ ಅಭಿಷೇಕ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಗಂಡ ಅಭಿಷೇಕ್ ಕನಕಪುರದ ಕರಿಕಲ್ಲ ದೊಡ್ಡಿಯ ನಿವಾಸಿ ಆಗಿದ್ದು, ಕೆಲ ತಿಂಗಳಿಂದ ಅಂಚೆಪಾಳ್ಯ ಗ್ರಾಮದಲ್ಲಿಯೇ ವಾಸವಾಗಿದ್ದರು.

ಭೀಮನ ಅಮಾವಾಸ್ಯೆ ಪ್ರಯುಕ್ತ ಗಂಡನಿಗೆ ಪಾದಪೂಜೆ ಮಾಡಿದ ಸ್ಪಂದನಾ, ಅದಾದ ಕೆಲ ಹೊತ್ತಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಮದುವೆಯ ನಂತರ ವರದಕ್ಷಿಣೆಗಾಗಿ ಗಂಡ ಅಭಿಷೇಕ್ ಹಾಗೂ ಅವನ ತಾಯಿ ಲಕ್ಷ್ಮಮ್ಮ ಇವರಿಂದ ಸ್ಪಂದನಾ ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾಳೆ ಎಂದು ಸ್ಪಂದನಾ ಪಾಲಕರು ಆರೋಪ ಮಾಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ವರದಕ್ಷಿಣೆ ತರುವಂತೆ ಗಂಡ ಮತ್ತು ಅತ್ತೆ ಟಾರ್ಚರ್ ಮಾಡಿದ್ದರು ಎಂದು ಸ್ಪಂದನಾ ತನ್ನ ತಂದೆ ಉದ್ಯಮಿ ಚಂದ್ರಗೆ ಹೇಳಿದ್ದಳು. ಬಳಿಕ 5 ಲಕ್ಷ ಹಣವನ್ನ ಕೊಟ್ಟು ರಾಜಿ ಸಂಧಾನ ಮಾಡಿಸಿದ್ದೇವೆ.ಇದೀಗ ನಿನ್ನೆ ನನಗೆ ಕರೆ ಮಾಡಿ ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಅಂಥ ಮಗಳು ಕಣ್ಣೀರಿಟ್ಟಿದ್ದಳು ಎಂದು ಸ್ಪಂದನಾ ತಂದೆ ಚಂದ್ರ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net