

wife cuts off husband ears : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪತಿಯನ್ನು ಕೊಲ್ಲಲು ಮಹಿಳೆಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ಸಂಚು ರೂಪಿಸಿ ಕಿವಿ ಕತ್ತರಿಸಿ ಸಿಕ್ಕಿ ಬಿದಿದ್ದಾಳೆ. ಈ ಘಟನೆ ಮಹಬೂಬಾಬಾದ್ ಜಿಲ್ಲೆಯ ಗಡ್ಡಿಗುಡೆಮ್ನಲ್ಲಿ ನಡೆದಿದೆ.
ರಶ್ಮಿತಾ ಮತ್ತು ಪ್ರಸಾದ್ ವಿವಾಹಿತರು. ಅವರಿಗೆ ಮಕ್ಕಳಿದ್ದಾರೆ. ಆದರೆ ರಶ್ಮಿತಾಗೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಅನಿಲ್ ಎನ್ನುವ ವ್ಯಕ್ತಿ ಪರಿಚಯವಾಗಿದ್ದನು. ನಂತರ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಸಂಬಂಧ ಹೊಂದಿದ್ದರು. ಈ ವಿಷಯ ಪ್ರಸಾದ್‌ಗೆ ತಿಳಿದಾಗ ರಶ್ಮಿತಾ ಬಳಿ ಜಗಳವಾಡಿ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ. ಪತಿ ಬುದ್ಧಿ ಮಾತು ಹೇಳಿದ್ದ ಕುರಿತಾಗಿ ರಶ್ಮಿತಾ ಕೋಪಗೊಂಡು ಪತಿ ಕಥೆ ಮುಗಿಸಲು ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ.
ಅಕ್ರಮ ಸಂಬಂಧಕ್ಕೆ ಪತಿ ಪ್ರಸಾದ್ ಅಡಚಣೆ ಆಗುತ್ತಾನೆಂದು ತನ್ನ ಪತಿಯನ್ನೇ ಕೊಲ್ಲಲು ನಿರ್ಧರಿಸಿದಳು. ಪತಿಯನ್ನೇ ಕೊಲ್ಲಲು ಗೆಳೆಯ ಅನಿಲ್ ಜತೆ ಸೇರಿ ಸ್ಕೆಚ್ ಹಾಕಿದಳು. ಈ ಪ್ರಕ್ರಿಯೆಯಲ್ಲಿ ಆತನ ಕಿವಿಗಳನ್ನು ಕಚ್ಚಿದಳು. ಪತ್ನಿ ರಶ್ಮಿತಾ. ತನ್ನ ಗೆಳೆಯ ಅನಿಲ್ ಜೊತೆ ಸೇರಿ ಪತಿ ಪ್ರಸಾದ್ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದಳು. ಆಕೆಯ ಪತಿ ಪ್ರಸಾದ್ ಜೀವಭಯದಿಂದ ಓಡಿ ಮನೆಯಿಂದ ಹೊರಗೆ ಬಂದಿದ್ದಾನೆ.
ಓಡಿಹೋಗಲು ಯತ್ನಿಸಿದ ಅನಿಲ್ನನ್ನು ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿ ಥಳಿಸಿದರು. ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅನಿಲ್ ಮತ್ತು ರಶ್ಮಿತಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.