

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಪತಿಯನ್ನು ಹುಡುಕಿ ಕೊಡುವಂತೆ ಪತ್ನಿ ಸೋಮವಾರ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿ ವೆಂಕಟಮಾದ ಅವರು ತೋಟದ ಮನೆಯಲ್ಲಿ ವಾಸವಾಗಿದ್ದು, ಸೆ.25 ರಂದು ಮಕ್ಕಳನ್ನು ನೋಡಿಕೊಂಡು ಬರಲು ನಾನು ಬೆಂಗಳೂರಿಗೆ ಹೋಗಿ ಅಲ್ಲಿಯೇ ನೆಲೆಸಿದ್ದೆ. ಅ.2ರಂದು ಬೆಳಗ್ಗೆ ನನ್ನ ಪತಿ ವೆಂಕಟಮಾದ ಮೈದುನ ವೆಂಕಟೇಶ್ ಮನೆಯಲ್ಲಿ ಉಪಾಹಾರ ತಿಂದು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಬಂಧಿಕರನ್ನು ವಿಚಾರಿಸಿದಾಗ ಯಾವುದೇ ಸುಳಿವು ಸಿಕ್ಕಿಲ್ಲ. ಆದ್ದರಿಂದ ಪತಿಯನ್ನು ಹುಡುಕಿ ಕೊಡುವಂತೆ ಪತ್ನಿ ಕೆಂಪಮ್ಮ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ವೆಂಕಟಮಾದ ಅವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು.