ಪತ್ನಿ ಆತ್ಮಹತ್ಯೆ ಪತಿಗೆ 5 ವರ್ಷ ಜೈಲು

Family Court
Published on

ಬೆಂಗಳೂರು: ಶೀಲ ಶಂಕಿಸಿ ಕಿರುಕುಳ ನೀಡಿದ ಕಾರಣಕ್ಕೆ ನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಸೇರಿ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿ 71ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ವಿದ್ಯಾರಣ್ಯಪುರದ ವೆಂಕಟೇಶ್ವರ ಲೇಔಟ್ ನಿವಾಸಿ ಭುವನೇಶ್ವರಿ ಮೃತೆ. ಈಕೆಯ ಪತಿ ಗಣಪತಿ ಅಲಿಯಾಸ್ ಮಾಣಿಕ್ಯಂ ಮತ್ತು ಕುಟುಂಬ ಸದಸ್ಯ ಮಹಾಲಿಂಗಂ ಎಂಬುವರಿಗೆ ತಲಾ 5 ವರ್ಷ ಹಾಗೂ ಮಾದಪ್ಪ ಮತ್ತು ಅನಿತಾ ಎಂಬುವರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಬಾಲಚಂದ್ರ ಎನ್. ಭಟ್, ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ, ಸಂತ್ರಸ್ತೆ ಪರ ವಾದ ಮಂಡಿಸಿದ್ದರು.

2013ರ ಜು.10ರ ಭುವನೇಶ್ವರಿ ಮತ್ತು ಗಣಪತಿ ಮದುವೆ ಆಗಿದ್ದು, ಒಟ್ಟಿಗೆ ನೆಲೆಸಿದ್ದರು. ಸ್ವಲ್ಪ ದಿನಕ್ಕೆ ಭುವನೇಶ್ವರಿ ಮೇಲೆ ಶೀಲ ಶಂಕಿಸಿ ಪತಿ ಮತ್ತು ಆಕೆಯ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ದೈಹಿಕ ಹಿಂಸೆ ಕೊಡುತ್ತಿದ್ದರು. ನೊಂದ ಗೃಹಿಣಿ ತವರುಮನೆಗೆ ಹೋಗಿದ್ದಳು. ಅಲ್ಲಿಗೂ ದೂರವಾಣಿ ಕರೆ ಮಾಡಿ ನಿಂದಿಸುತ್ತಿದ್ದ ಕಾರಣಕ್ಕೆ ಭುವನೇಶ್ವರಿ, ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಪಾಲಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಸಂತ್ರಸ್ತೆ ವೈದ್ಯಾಧಿಕಾರಿಗಳ ಮುಂದೆ ಮರಣಪೂರ್ವ ಹೇಳಿಕೆ ನೀಡಿ, ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಳು.

ಪ್ರಕರಣ ದಾಖಲಿಸಿಕೊಂಡ ಹೆಬ್ಬಾಳ ಪೊಲೀಸರು ಪತಿ ಮತ್ತು ಇತರರನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net