ಪತಿಯ ಮರ್ಮಾಂಗವನ್ನೇ ಕಡಿದ ಪತ್ನಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Wife Husband
Published on

ಕಿತ್ವೆ (ಜಾಂಬಿಯಾ): ಕುಪಿತಗೊಂಡ ಮಹಿಳೆಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಕಚ್ಚಿರುವ ವಿಚಿತ್ರ ಘಟನೆ ಜಾಂಬಿಯಾದ ಕಿತ್ವೆಯಲ್ಲಿ ನಡೆದಿದ್ದು, ಇದಕ್ಕೆ ಕಾರಣ ಇಲಿಯೆಂಬುದು ಇನ್ನು ಅಚ್ಚರಿಯ ಸಂಗತಿಯಾಗಿದೆ.

ಕಿತ್ವೆ ನಿವಾಸಿ ಅಬ್ರಹಾಂ ಮುಸೊಂಡಾ (52) ಮೇಲೆ 40 ವರ್ಷ ವಯಸ್ಸಿನ ಪತ್ನಿ ಮುಕಪಾ ದಾಳಿ ಮಾಡಿ ಮರ್ಮಾಂಗವನ್ನೇ ಕಡಿದು ಸುದ್ದಿಯಾಗಿದ್ದಾಳೆ. ಬೆಡ್​ರೂಮ್​ನಲ್ಲಿದ್ದ ಇಲಿಯನ್ನು ಹೊರಗಾಕಲು ನಿರಾಕರಿಸಿದ್ದಕ್ಕೆ ಹೀಗೆ ಮಾಡಿದಳು ಎಂದು ಸಂತ್ರಸ್ತ ಪತಿ ಅಳಲು ತೋಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಮುಕಪಾ, ಇಲಿಯು ತುಂಬಾ ಕಿರಿಕಿರಿ ಉಂಟು ಮಾಡುತ್ತಿತ್ತು ಎಂದಿದ್ದಾಳೆ. ಫ್ರೆಂಡ್ಸ್​ ಒಟ್ಟಿಗೆ ಮದ್ಯ ಸೇವಿಸಿ ಮನೆಗೆ ಮರಳಿದಾಗ ಬೆಡ್​ ಬಳಿ ಇಲಿ ಇರುವುದನ್ನು ನೋಡಿದೆ. ಅಲ್ಲದೆ, ರೂಮ್​ ತುಂಬಾ ಅಡ್ಡಾಡುವುದನ್ನು ನೋಡಿ ಹಾಗೂ ಶಬ್ಧವನ್ನು ಕೇಳಿ ನಿದ್ರಿಸಲು ಆಗುತ್ತಿರಲಿಲ್ಲ. ಬಳಿಕ ಅದನ್ನು ಹೊರಗಾಕುವಂತೆ ಪತಿಗೆ ಆದೇಶಿಸಿದೆ. ಆದರೆ, ಪತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಮರ್ಮಾಂಗವನ್ನು ಕಡಿದು ಕೋಪ ತೀರಿಸಿಕೊಂಡೆ ಎಂದು ಮುಕಪಾ ತಪ್ಪೊಪ್ಪಿಕೊಂಡಿದ್ದಾಳೆ.

ಮೊದಲೇ ಪ್ರತ್ಯೇಕವಾಗಿದ್ದ ದಂಪತಿ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳ ಸಹ ಮಾಹಿತಿ ನೀಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮುಸೊಂಡಾ ಕಿತ್ವೆ ಟೀಚಿಂಗ್​ ಆಸ್ಪತ್ರೆಗೆ ದಾಖಲಾಗಿ ತುರ್ತು ಚಿಕಿತ್ಸೆಯನ್ನು ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net