ಮನೆ ಸ್ವಚ್ಛಗೊಳಿಸದ ಕಾರಣಕ್ಕೆ ತನ್ನ ಪತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪತ್ನಿ! | Cleaning

Bbau (65)
Published on

ಅಮೆರಿಕ: ಮನೆ ಸ್ವಚ್ಛಗೊಳಿಸುವ( Cleaning) ಬಗ್ಗೆ ನಡೆದ ವಾಗ್ವಾದದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಅಮೆರಿಕದ ಉತ್ತರ ಕೆರೊಲಿನ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಪತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 44 ವರ್ಷದ ಚಂದ್ರಪ್ರಭಾ ಸಿಂಗ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

ನಡೆದ ಘಟನೆ ಏನು?

ಮನೆಯನ್ನು ಸ್ವಚ್ಛಗೊಳಿಸದ ಕಾರಣ ತನ್ನ ಹೆಂಡತಿ ಹತಾಶೆಗೊಂಡು "ಉದ್ದೇಶಪೂರ್ವಕವಾಗಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ" ಎಂದು ಅಧಿಕಾರಿಗಳಿಗೆ ಚಂದ್ರಪ್ರಭಾ ಸಿಂಗ್ ಅವರ ಪತಿ ಅರವಿಂದ್ ಸಿಂಗ್ ತಿಳಿಸಿದ್ದಾನೆ.

ನಾನು ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ತನ್ನ ಪತಿ ಸಹಾಯ ಮಾಡಬಹುದೇ ಎಂದು ಕೇಳಿದ್ದೇನೆ. ಆದರೆ, ಅವರ ಉತ್ತರ ಬೇರೆದ್ದೆ ಆಗಿತ್ತು. ಮನೆಯ ಅಶುದ್ಧತೆಯಿಂದ ಅಸಮಾಧಾನಗೊಂಡ ಅವಳು, ಚಾಕು ಹಿಡಿದುಕೊಂಡಗಾಗ ಆಕಸ್ಮಿಕವಾಗಿ ತನ್ನ ಗಂಡನ ಕುತ್ತಿಗೆ ಭಾಗದಲ್ಲಿ ತಗುಲಿದೆ ಎಂದು ಆಕೆ ಪೊಲೀಸರ ಮುಂದೆ ತಿಳಿಸಿದ್ದಾಳೆ. ಎಂಡ್‌ಹೇವನ್ ಪ್ರಾಥಮಿಕ ಶಾಲೆಯಲ್ಲಿ ಚಂದ್ರಪ್ರಭಾ ಸಿಂಗ್ ಕೆ -3 ತರಗತಿಗಳಿಗೆ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net