ಇದೆಂಥಾ ವಿಚಿತ್ರ ಹಾವು? ದಂಗಾದ ನೆಟ್ಟಿಗರು! ಇಲ್ಲಿದೆ ನೋಡಿ ವೈರಲ್ ವಿಡಿಯೋ

WhatsApp Image 2024-03-21 at 4.44.40 PM
Published on

ಬೆಂಗಳೂರು: ಸೋಷಿಯಲ್ ಮೀಡಿಯಾ ಅಂದರೆ ಹಾಗೇ. ಜಗತ್ತಿನ ಯಾವ ಮೂಲೆಯಲ್ಲಿ ಎಂಥಹದ್ದೇ ವಿಚಿತ್ರ, ವಿಲಕ್ಷಣ ಘಟನೆ ನಡೆಯಲಿ ಅದು ಸಾಮಾಜಿಕ ಜಾಲತಾಣದ ಹರಿದಾಡಿದರೆ ಸಾಕು. ಕೆಲವೇ ಕೆಲವು ನಿಮಿಷಗಳಲ್ಲಿ ಜಾಗತಿಕವಾಗಿ ವೈರಲ್ ಆಗುವ ಮೂಲಕ ನೆಟ್ಟಿಗರ ಚರ್ಚೆಗೆ ಗ್ರಾಸವಾಗುತ್ತದೆ.

ಸದ್ಯ ಇದೇ ಸಾಲಿಗೆ ಇಲ್ಲೊಂದು ವಿಡಿಯೋ ಸೇರ್ಪಡೆಯಾಗಿದ್ದು, ತಲೆಯ ಮೇಲೆ ಪುಕ್ಕ ಹೊತ್ತಂತೆ ಹಾವೊಂದು ಸಂಚರಿಸಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಈ ವಿಡಿಯೋ ತುಣುಕು ನೋಡಿದ ನೆಟ್ಟಿಗರು ಹಾವು ಕಿರೀಟ ಧರಿಸಿದೆ, ಇದು ಹಾವುಗಳ ರಾಜನೇ ಇರಬೇಕು ಎಂದೆಲ್ಲಾ ವ್ಯಾಪಕವಾಗಿ ಕಮೆಂಟ್​ ಮಾಡಿದ್ದಾರೆ. ಅಸಲಿಗೆ ಅದೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಇದೇ ರೀತಿ ವಿಚಿತ್ರ, ವಿಲಕ್ಷಣ ಎಂಬಂತೆ ಇತ್ತೀಚೆಗೆ ಬಿಳಿ ಮತ್ತು ಕೆಂಪು ಬಣ್ಣದ ಹಾವುಗಳು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೋಡುಗರನ್ನು ಭಾರೀ ಅಚ್ಚರಿಗೆ ದೂಡಿದೆ. ಸದ್ಯ ಈ ವಿಡಿಯೋ ವ್ಯಾಪಕವಾಗಿ ಹರಿದಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net