ವ್ಯಾಪಕವಾಗಿ ನಾಯಿಗಳ ಹಾವಳಿ, ಬೌ ಬೌ ದಾಳಿಗಿಲ್ಲ ಕಡಿವಾಣ: ಜನ ಹೈರಾಣ

IMG_20251010_235550.jpg
Published on

ಚಿಕ್ಕಬಳ್ಳಾಪುರ: ವ್ಯಾಪಕವಾಗಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದು ದಾಳಿ ಪ್ರಕರಣಗಳು, ನಾಯಿ ಕಡಿತದ ಪ್ರಕರಣಗಳಿಂದ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.  ಯಾವುದೇ ಬಡಾವಣೆ, ಗಲ್ಲಿಗಳಲ್ಲಿ ನೋಡಿದರೂ ದೊಡ್ಡ ಹಿಂಡು ಕಂಡು ಬರುತ್ತದೆ. ಬೌಬೌ ಸದ್ದಿನ ಆರ್ಭಟ ಜೋರಾಗಿರುತ್ತದೆ.  ಸ್ಥಳೀಯ ಆಡಳಿತ ಸಂಸ್ಥೆಗಳು ಕೆಲವೇ ಕೆಲವು ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೆರ ವೇರಿಸಿದರೂ ಪ್ರಯೋಜನವಾಗುತ್ತಿಲ್ಲ. ನಾಯಿಗಳ ಸಂಖ್ಯೆ ಪ್ರಮಾಣ ಏರಿಕೆಯಾಗುತ್ತಿದೆ. ನಾಯಿ ಕಡಿತದಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ.
ಈಗ ಯಾವುದೇ ಗಲ್ಲಿಯಲ್ಲೂ ಓಡಾಡಲು ಭಯ ಬೀಳುವಂತಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು, ಅದರಲ್ಲೂ ಅಪರಿಚಿತರ ಮೇಲೆ ನಾಯಿಗಳ ದಾಳಿ ನಡೆಸುತ್ತಿವೆ. ಇದರ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದರೂ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಾಣಿ ದಯಾ ಸಂಘಗಳ ಕಾನೂನು ಹೋರಾಟಕ್ಕೆ ಅಸಹಾಯಕತೆ ವ್ಯಕ್ತಪಡಿಸುತ್ತಿವೆ. ಇದರಿಂದ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ ಎಂಬ ಅಳಲು ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net