ಬಾಪೂಜಿ ನಗರ ರಾಜಕಾಲುವೆ ಅಗಲೀಕರಣ ಮಾಡಿ

bapuji nagara
ಬಾಪೂಜಿ ನಗರದ ರಾಜಕಾಲುವೆ ಅಗಲೀಕರಣಕ್ಕೆ ಒತ್ತಾಯಿಸಿ ಸುರೇಖಾ ಮುರಳೀಧರ್ ನೇತೃತ್ವದಲ್ಲಿ ಸರೋಜಮ್ಮ, ಟಿ.ಎಸ್.ಗುರುಮೂರ್ತಿ, ರಶ್ಮಿ ಶಿವಕುಮಾರ್, ಶಿವಪ್ರಸಾದ್, ರಾಜಣ್ಣ, ಅಣ್ಣಯ್ಯ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಬಾಪೂಜಿ ನಗರದಲ್ಲಿರುವ ರಾಜಕಾಲುವೆ ಅಗಲೀಕರಣಕ್ಕೆ ಒತ್ತಾಯಿಸಿ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಬುಧವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಾರ್ಡ್ ನಂ. 12 ರ ಬಾಪೂಜಿ ನಗರದಲ್ಲಿರುವ ರಾಜಕಾಲುವೆ ಸಾಗರ ರಸ್ತೆಯಿಂದ ಆರಂಭವಾಗಿ ಗಾರ್ಡನ್ ಏರಿಯಾ, ಗಾಂಧಿ ಪಾರ್ಕ್ ಮೂಲಕ ಬಾಪೂಜಿ ನಗರ ಸೇರುತ್ತದೆ. 10 ನಿಮಿಷಗಳ ಮಳೆಗೆ ಈ ಕಾಲುವೆ ಉಕ್ಕಿ ಹರಿಯುತ್ತದೆ. ತಿಲಕ್ ನಗರ, ದುರ್ಗಿಗುಡಿ, ನೆಹರೂ ಸ್ಟೇಡಿಯಂ, ಜಯನಗರ ಭಾಗದ ಚರಂಡಿ ನೀರು ಈ ರಾಜಕಾಲುವೆಯನ್ನು ಸೇರುತ್ತದೆ. ಈ ಕಾಲು 2.5 ಮೀಟರ್ ಅಗಲವಿದೆ. ಹೀಗಾಗಿ ನೀರು ಉಕ್ಕಿ ಬಾಪೂಜಿ ನಗರ ಹಾಗೂ ಟ್ಯಾಂಕ್ ಮೊಹಲ್ಲಾದ ಮನೆಗಳಿಗೆ ನೀರು ನುಗ್ಗುತ್ತದೆ ಎಂದು ತಿಳಿಸಿದರು.
ರಾಜಕಾಲುವೆ ಕಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿಯುವುದಿಲ್ಲ. ಹೀಗಾಗಿ ಇದನ್ನು ಅಗಲೀಕರಣ ಮಾಡಬೇಕು. ಕೆಲವು ಬಡಾವಣೆಗಳ ನೀರು ಇದಕ್ಕೆ ಸೇರದಂತೆ ಪರ್ಯಾಯ ವ್ಯವಸ್ಥೆ ರೂಪಿಸಬೇಕೆಂದು ಒತ್ತಾಯಿಸಿದರು.
ಸ್ಥಳೀಯ ನಾಗರಿಕರಾದ ಟಿ.ಎಸ್. ಗುರುಮೂರ್ತಿ, ಸರೋಜಮ್ಮ, ರಾಜಣ್ಣ, ರಶ್ಮಿ ಶಿವಕುಮಾರ್, ಅಣ್ಣಯ್ಯ, ಶಿವಪ್ರಸಾದ್, ಪ್ರದೀಪ್, ರಂಗನಾಥ್, ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net