

ಬೆಂಗಳೂರು: ನಾನೇಕೆ ರಾಜೀನಾಮೆ ಕೊಡಲಿ(Why should I resign?)? ರಾಜೀನಾಮೆಯನ್ನು ನಿಮ್ಮ ಕೈಗೆ ಕೊಡಲಾ? ಎಂದು ಸಿಎಂ ಸಿದ್ದರಾಮಯ್ಯ(CM Siddaramaiah) ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಕೈಮಾಡಲು ಮುಂದಾದ ಪ್ರಕರಣಕ್ಕೆ ಬಿಜೆಪಿಯವರು ರಾಜೀನಾಮೆ ಕೇಳಿರುವ ಕುರಿತ ಪ್ರಶ್ನೆಗೆ ಸಿಎಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮೊದಲು ಬಿಜೆಪಿಯವರು ರಾಜೀನಾಮೆ ನೀಡಲಿ. ಘಟನೆ ಬಗ್ಗೆ ಸೋಮವಾರವೇ ಸ್ಪಷ್ಟನೆ ನೀಡಿದ್ದೇನೆ. ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.