Bihar Election | ಇಷ್ಟು ಬೆಳಕಿರುವಾಗ ಲ್ಯಾಂಟರ್ನ್​ ಬೇಕೆ..? ಆರ್​ಜೆಡಿ ಚಿಹ್ನೆ ಉಲ್ಲೇಖಿಸಿ ಪ್ರಧಾನಿ ಮೋದಿ ವಾಗ್ದಾಳಿ

Modi In Bihar
Published on

Patna: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ(Bihar Election) ಎನ್​​ಡಿಎ ಮೈತ್ರಿಕೂಟ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ(ಅ 24) ಹೇಳಿದರು.

ಬಿಜೆಪಿ-ಜೆಡಿಯು ಮೈತ್ರಿಕೂಟ ಚುನಾವಣೆಯಲ್ಲಿ ಗೆದ್ದರೆ ನಿತೀಶ್​ ತಮ್ಮ ಹುದ್ದೆಯಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಎಂಬುದು ಇನ್ನೂ ಬಹಿರಂಗಪಡಿಸದಿದ್ದರು, ಅವರ ಮುಖವನ್ನಿಟ್ಟುಕೊಂಡೆ ಚುನಾವಣೆ ಎದುರಿಸಲಾಗುವುದು ಎಂದು ಬಿಜೆಪಿ ನಾಯಕರುಗಳು ಹೇಳಿಕೊಂಡಿದ್ದಾರೆ.

ಸಮಷ್ಟಿಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಷ್ಟು ಬೆಳಕು ಇರುವಾಗಲೂ ನಮಗೆ ಲ್ಯಾಂಟರ್ನ್ ಬೇಕೇ?" ಎಂದು ಕೇಳುತ್ತಾ, ಅಲ್ಲಿ ನೆರೆದಿದ್ದ ಜನರ ಮೊಬೈಲ್ ಬ್ಯಾಟರಿ ದೀಪಗಳನ್ನು ಆನ್ ಮಾಡುವಂತೆ ಸೂಚಿಸುವ ಮೂಲಕ ಆರ್​ಜೆಡಿಯನ್ನು ಟೀಕಿಸಿದರು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಬಹುಕಾಲದ ಬೇಡಿಕೆಯನ್ನು ಎನ್‌ಡಿಎ ಸರ್ಕಾರ ಈಡೇರಿಸಿದೆ ಎಂದ ಪ್ರಧಾನಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಇದೇ ವೇಳೆ ಜಿಎಸ್‌ಟಿ ಬಚತ್ ಉತ್ಸವದ ಪ್ರಯೋಜನಗಳನ್ನು ಜನರು ಈಗಾಗಲೇ ವೀಕ್ಷಿಸುತ್ತಿದ್ದಾರೆ, ಛಠ್ ಪೂಜಾ ಹಬ್ಬಕ್ಕೆ ಮುಂಚಿತವಾಗಿ ಶುಭಾಶಯ ಕೋರುತ್ತಾ, ಎನ್‌ಡಿಎ ಅಧಿಕಾರಕ್ಕೆ ಮರಳಿದ ನಂತರ ಬಿಹಾರ ಹೊಸ ವೇಗದಲ್ಲಿ ಮುಂದುವರಿಯುತ್ತದೆ ಎಂಬ ಭರವಸೆ ನೀಡಿದರು.

ಕರ್ಪೂರಿ ಠಾಕೂರ್​ಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ..

ಬಿಹಾರದಲ್ಲಿ ಸಮಾಜವಾದಿ ಐಕಾನ್ ಆಗಿರುವ ಕರ್ಪೂರಿ ಠಾಕೂರ್​ರನ್ನು ಉಲ್ಲೇಖಿಸಿದ ನಮೋ, ತಮ್ಮ ಸರ್ಕಾರವು ಉತ್ತಮ ಆಡಳಿತದ ದೃಷ್ಟಿಕೋನವನ್ನು ಜನರ ಸಮೃದ್ಧಿಯನ್ನಾಗಿ ಪರಿವರ್ತಿಸುತ್ತಿದೆ, ವಿಪಕ್ಷ ನಾಯಕರುಗಳು ಸಾವಿರಾರು ಕೋಟಿ ಮೌಲ್ಯದ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದು, ಠಾಕೂರ್ ಅವರ ಪರಂಪರೆ ಮತ್ತು ಬಿರುದನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಂತಹ ಮಹಾನ್​ ನಾಯಕನಿಗೆ ಅವಮಾನವಾದರೆ ಬಿಹಾರದ ಜನ ಎಂದಿಗೂ ಸಹಿಸುವುದಿಲ್ಲ ಮತ್ತು ತಮ್ಮ ಮತಗಳ ಮೂಲಕ ಬಲವಾದ ಪ್ರತಿಕ್ರಿಯೆ ನೀಡಲಿದ್ದಾರೆ ಎಂದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net