

ನವದೆಹಲಿ: ಫೆವಿಕಾಲ್, ಕ್ಯಾಡ್ಬರಿ ಮತ್ತು ಏಷ್ಯನ್ ಪೇಂಟ್ಸ್‌ನ ಐಕಾನಿಕ್ ಜಾಹೀರಾತುಗಳ ದಂತಕಥೆ ಎಂದೇ ಪ್ರಸಿದ್ಧಿ ಪಡೆದ ಪಿಯೂಷ್ ಪಾಂಡೆ((70) ಶುಕ್ರವಾರ ನಿಧನರಾದರು(Passes Away).
ಜಾಹೀರಾತು ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಕೆಲ ದಿನಗಳಿಂದ ಪಿಯೂಷ್ ಪಾಂಡೆ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಫೆವಿಕಾಲ್, ಕ್ಯಾಡ್‌ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಮತ್ತು ಹಲವಾರು ಇತರ ಬ್ರಾಂಡ್‌ಗಳಿಗೆ ಗಮನಾರ್ಹ ಜಾಹೀರಾತುಗಳನ್ನು ರಚಿಸಿದ್ದಾರೆ. ಪಾಂಡೆ ಅವರು 2016 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
"ಪಾಂಡೆ ಜಾಹೀರಾತು ಮತ್ತು ಸಂವಹನ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. ವರ್ಷಗಳಲ್ಲಿ ನಮ್ಮೊಂದಿಗಿನ ಸಂವಹನವನ್ನು ನಾನು ಪ್ರೀತಿಯಿಂದ ಸ್ಮರಿಸುತ್ತೇನೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಇವೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಪಾಂಡೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರನ್ನು "ಜಾಹೀರಾತು ಜಗತ್ತಿನಲ್ಲಿ ಒಂದು ವಿದ್ಯಮಾನ" ಎಂದು ಬಣ್ಣಿಸಿದ್ದಾರೆ.(ಏಜೆನ್ಸೀಸ್)