ಅಕುಲ್​ ಬಾಲಾಜಿ ಕಾಲೆಳೆದ ಅಭಿನಯ ಚಕ್ರವರ್ತಿ; ಸೂಪರ್​ ಸ್ಮಾರ್ಟ್​ ಎಂದಿದ್ದೇಕೆ ಕಿಚ್ಚ ಸುದೀಪ್​​ | Kichcha Sudeep

Untitled design (85)
Published on

ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಕನ್ನಡ ಬಿಗ್​ಬಾಸ್(BiggBoss)​ ಶೋ ಸದ್ಯ ಎಲ್ಲರ ಮನದಲ್ಲಿನ ಟಾಪಿಕ್​ ಆಗಿದೆ. ಅಂದ್ಹಾಗೆ ಇದು ಸೀಸನ್​ 11 ಎಂಬುದು ಗೊತ್ತೆ ಇದೆ. ಅದೂ ಅಲ್ಲದೆ ಕಳೆದ 10 ಸೀಸನ್​ಗಳನ್ನು ಕಿಚ್ಚ ಸುದೀಪ್​​​​(Kichcha Sudeep) ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಎಲ್ಲಾ ಸೀಸನ್ಗಳ ಕಂಟೆಸ್ಟೆಂಟ್​ಗಳೊಂದಿಗೆ ಸುದೀಪ್​ ಅವರು ಒಂದು ರೀತಿಯ ಬಾಂಧವ್ಯವನ್ನು ಹೊಂದಿದ್ದಾರೆ. ಅಭ್ಯರ್ಥಿಗಳನ್ನು ತಮ್ಮ ಮನೆಯ ಸದಸ್ಯರೇ ಎಂಬಂತೆ ಅವರೊಂದಿಗೆ ಅಭಿನಯ ಚಕ್ರವರ್ತಿ ನಡೆದುಕೊಳ್ಳುತ್ತಾರೆ.

ಸದ್ಯ ಮ್ಯಾಕ್ಸ್​ ಸಿನಿಮಾ ಬಿಡುಗಡೆಯಾಗಿದ್ದು ಸುದೀಪ್​ ಅದರ ಒಡಾಟದಲ್ಲಿದ್ದಾರೆ. ಮ್ಯಾಕ್ಸ್​​ ಸಿನಿಮಾದ ಪ್ರಚಾರದ ವೇಳೆ ಆ್ಯಂಕರ್ ಅನುಶ್ರೀ ಅವರಿಗೆ ನೀಡಿರುವ ಸಂದರ್ಶನದಲ್ಲಿ ಬಿಗ್​ಬಾಸ್​​ ಸೀಸನ್​​​ 2ರ ವಿನ್ನರ್​​​​ ಅಕುಲ್​ ಬಾಲಾಜಿ ಅವರ ಕಾಲೆಳೆದಿದ್ದಾರೆ. ಇಂಟರ್​ವ್ಯೂ ವೇಳೆ ಕಾಫಿ ಕಾಲಿಯಾಗುತ್ತದೆ. ಆ ಸಮಯದಲ್ಲಿ ನಾನು ನೀಡಿದ್ದ ಕಾಫೀ ಖಾಲಿಯಾಗಿಲ್ಲ ಆದರೆ ನನಗೆ ಕೊಟ್ಟಿದ್ದ ಕಾಫಿ ಖಾಲಿಯಾಗಿದ್ದು ನೀವು ಮತ್ತೊಂದು ಗ್ಲಾಸ್​ ಕಾಫಿ ನೀಡುತ್ತಿಲ್ಲ ಎಂದು ತಮಾಷೆಯಾಗಿ ಮಾತು ಆರಂಭಿಸುತ್ತಾರೆ. ಬಳಿಕ ನನಗೆ ಕಾಫಿ ನೀಡಬಾರದೆಂದು ಅಕುಲ್​ ಬಾಲಾಜಿ ಹೇಳಿದ್ದಾನೆಯೇ ಎಂದು ಕೇಳುತ್ತಾರೆ.

ನಟ ಅಕುಲ್​ ಬಾಲಾಜಿ ಬಜೆಟ್​ನಲ್ಲಿ ಲೈಫ್​ ಲಿಡ್​ ಮಾಡೋದು. ಅದು ಅವರ ದುಡ್ಡು ಎಂದು ಬಂದಾಗ ಮಾತ್ರ ಎಂದು ನಗುತ್ತಾರೆ. ಸಂದರ್ಭವೊಂದನ್ನು ಉದಾಹರಣೆಯಾಗಿ ನೀಡಿದ ಕಿಚ್ಚ ಸುದೀಪ್​​​, ಕಿಚ್ಚ ಬ್ರೋ ನೀವು ಇದನ್ನು ನೋಡಿದ್ದೀರಾ. ಇದನ್ನು ನೋಡಿ ಕಿಚ್ಚ ಬ್ರೋ ಅಂತಾ ಯಾವುದಾದರು ವಸ್ತು ಬಗ್ಗೆ ಹೇಳ್ತಾರೆ. ಹೇಗೆ ಎಂದರೆ ನಾಳೆ ಅಕುಲ್​ ಅದನ್ನು ಕಳುಹಿಸಿಕೊಡುತ್ತಾನೆ ಎಂದು ತಿಳಿದುಕೊಳ್ಬೇಕು. ಆದ್ರೆ ಅಷ್ಟರಲ್ಲಾಗಲೇ ಇಲ್ಲಾ ಕಿಚ್ಚ ಬ್ರೋ ಲಿಂಕ್​ ಕಳುಹಿಸಿಕೊಡುತ್ತೇನೆ. ನೀವೊಮ್ಮೆ ನೋಡಿ.. ಆರ್ಡರ್​ ಮಾಡಿ ಕಿಚ್ಚ ಬ್ರೋ ಅಂತಾರೆ ಕೊನೆಯಲ್ಲಿ ಎಂದು ಹೇಳಿದ್ರು.

ನಗುತ್ತಲೇ ಇನ್ನೊಂದು ಸಂದರ್ಭವನ್ನು ಸುದೀಪ್ ವಿವರಿಸಿದರು. ​​​​ ಒಂದು ಬಾರಿ ಅಕುಲ್​​ ಕಿಚ್ಚ ಬ್ರೋ ಒಂದು ರೆಸಾರ್ಟ್​ ಮಾಡಿದ್ದೀನಿ ಎಂದು ಹೇಳಿದ್ರು. ನೋಡಲು ತುಂಬಾ ಚೆನ್ನಾಗಿ ಮಾಡಿದ್ದೀನಿ ಅಂತಾ ಫೋಟೋ ತೋರಿಸಿದ್ರು. ನಾನು ಆ ಫೋಟೋ ನೋಡಿ ಬಿಗ್​ಬಾಸ್​ ಪ್ರಾಪರ್ಟಿ ಇದ್ದಾಗಿ ಇದ್ಯಲ್ಲೋ ಎಂದು ಕೇಳಿದೆ. ಅದಕ್ಕೆ ಅಕುಲ್​ ಹೇಳಿದ್ದು ಕೇಳಿ ನಗು ಜತಗೆ ಶಾಕ್​ ಕೂಡ ಆಯ್ತು. ಕಿಚ್ಚ ಬ್ರೋ ನಾನು ಅಲ್ಲೇನೆ ಹೋಗ್ಬಿಟ್ಟು ಅವರು ಹೇಗಿದ್ರು ಆ ಹಳೆಯ ಪ್ರಾಪಟ್ಟಿ ಉಪಯೋಗಿಸೋದಿಲ್ಲ ಅಂತಾ ಗೊತ್ತಾದಾಗ ತಗೊಂಡೆ.. ಕಿಚ್ಚ ಬ್ರೋ ಎಷ್ಟಕ್ಕೆ ಕ್ರ್ಯಾಕ್​ ಮಾಡಿರಬಹುದು ಹೇಳಿ ಅಂತ ನನ್ನನ್ನೇ ಕೇಳಿದ್ದ. ಒಂದು ಅಮೌಂಟ್​ ಹೇಳಿ ಇಷ್ಟಕ್ಕೆ ಕ್ರ್ಯಾಕ್​ ಮಾಡಿ ತಂದೆ ಅಂತಾ ತಿಳಿಸಿದ್ದು ಇದೆ.

ಬಿಗ್​​ಬಾಸ್​ ಮನೆಲಿರೋ ಇಡೀ ಪ್ರಾಪರ್ಟಿನೆಲ್ಲಾ ತಗೊಂಡೋಗಿ ರೆಸಾರ್ಟ್​​ನಲ್ಲಿ ಹಾಕ್ಬಿಟ್ಟಿದ್ದಾರೆ ಅಕುಲ್​​. ಲೇ ನಮ್ಮ ತಲೆಗೆ ಇದೆಲ್ಲಾ ಬರೋದಿಲ್ವಲ್ಲೊ ಅಂತಾ ಬಳಿಕ ನಾನು ಹೇಳಿದೆ. ನಮ್ಮ ಬುಡದಿಂದ ತಗೊಂಡೋಗಿ ಅಲ್ಲಿ ಬ್ಯುಸಿನೆಸ್​ ಸ್ಟಾರ್ಟ್​ ಮಾಡ್ಬಿತಿದ್ದಾರೆ ಎಂದು ಕಿಚ್ಚ ತಮಾಷೆಯಾಗಿ ಹೇಳಿದ್ದಾರೆ. ಅಕುಲ್​ ಇದುವರೆಗೂ ಮಾಡದೆ ಇರುವ ಒಂದೇ ಒಂದು ಕೆಲಸ ಅಂದರೆ ನನ್ನ ವಸ್ತುವನ್ನೇ ನನಗೆ ಮಾರಿಲ್ಲ ಎಂದರು. ಅಕುಲ್ ಅವರನ್ನು ಅಭಿನಯ ಚಕ್ರವರ್ತಿ ಸುದೀಪ್​​ ಸೂಪರ್​ ಸ್ಮಾರ್ಟ್​​​​​ ಎಂದು ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net