ಚಿನ್ನವನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಏಕೆ ಸುತ್ತಿಡಲಾಗುತ್ತದೆ? ಇಲ್ಲಿದೆ ನೋಡಿ ಅಚ್ಚರಿ ಕಾರಣ... Gold

Gold
Published on

Gold : ಚಿನ್ನ ಅಥವಾ ಹಳದಿ ಲೋಹ ಅನಾದಿ ಕಾಲದಿಂದಲೂ ಭಾರತೀಯರ ಅವಿಭಾಜ್ಯ ಅಂಗವಾಗಿದೆ. ಏನೇ ಶುಭ ಕಾರ್ಯ ನಡೆಯಲಿ ಚಿನ್ನವನ್ನು ಧರಿಸುವುದು ವಾಡಿಕೆಯಾಗಿದೆ. ಅದರಲ್ಲೂ ಮದುವೆ ಅಂತಾ ಬಂದಾಗ ಚಿನ್ನ ಮುಖ್ಯವಾಗಿ ಬೇಕೇ ಬೇಕು.

ಅಂದಹಾಗೆ, ಇಂದು ಚಿನ್ನ ಕೊಳ್ಳುವವರ ಸಂಖ್ಯೆ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಭಾರಿ ಬೇಡಿಕೆ ಇರುವುದರಿಂದಲೇ ಬೆಲೆ ಕೂಡ ಗಗನಮುಖಿಯಾಗುತ್ತಿದೆ. ಚಿನ್ನವನ್ನು ಖರೀದಿ ಮಾಡುವಾಗ ಅದನ್ನು ಗುಲಾಬಿ ಅಥವಾ ಮೆಜೆಂಟಾ ಕಾಗದದಲ್ಲಿ ಸುತ್ತಿಡುವುದನ್ನು ನೀವು ನೋಡಿದ್ದೀರಾ? ಚಿನ್ನ ಕೊಡುವಾಗಲೂ ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತು ಕೊಡುತ್ತಾರೆ? ಈ ಬಣ್ಣದ ಕಾಗದವನ್ನೇ ಏಕೆ ಬಳಸುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಅದಕ್ಕೆ ಒಂದು ಕಾರಣ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

ಪ್ರಾಚೀನ ಕಾಲದಿಂದಲೂ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಗುಲಾಬಿ ಕಾಗದದಲ್ಲಿ ಸುತ್ತಿಡಲಾಗುತ್ತಿತ್ತು. ಆಭರಣಗಳ ಮೇಲಿನ ಗೀರುಗಳನ್ನು ತಪ್ಪಿಸಲು ಇದನ್ನು ಮಾಡಲಾಗುತ್ತದೆ. ಚಿನ್ನವನ್ನು ಇರಿಸಲಾಗುವ ಪೆಟ್ಟಿಗೆ ಅಥವಾ ಇತರ ಆಭರಣಗಳಿಂದ ಗೀರು ಬರದಂತೆ ತಡೆಯಲು ವಿಶೇಷ ಗುಲಾಬಿ ಕಾಗದದಲ್ಲಿ ಸುತ್ತಿಡಲಾಗುತ್ತದೆ.

ಅಲ್ಲದೆ, ಗುಲಾಬಿ ಕಾಗದವು ಸ್ವಲ್ಪ ಲೋಹೀಯ ಹೊಳಪನ್ನು ಹೊಂದಿರುತ್ತದೆ. ಆದ್ದರಿಂದ, ಆಭರಣಗಳನ್ನು ಅದರ ಮೇಲೆ ಇರಿಸಿದಾಗ ಅದು ಸೌಂದರ್ಯವನ್ನು ಹೆಚ್ಚಿಸುತ್ತದೆ. ಇನ್ನು ಗುಲಾಬಿ ಕಾಗದವು ಟ್ಯಾನಿಂಗ್ ವಿರೋಧಿ ಲೇಪನವನ್ನು ಹೊಂದಿದ್ದು ಅದು ಚಿನ್ನದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ತೇವಾಂಶ ಮತ್ತು ಧೂಳಿನಿಂದ ರಕ್ಷಿಸುತ್ತದೆ.

ಇದಿಷ್ಟೇ ಅಲ್ಲದೆ, ಗುಲಾಬಿ ಬಣ್ಣವು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದ ಬಣ್ಣವಾಗಿದೆ. ಚಿನ್ನದ ಆಭರಣಗಳು ಕಾಲಾನಂತರದಲ್ಲಿ ಸ್ವಲ್ಪ ಕಪ್ಪಾಗುತ್ತವೆ. ಗುಲಾಬಿ ಕಾಗದದಲ್ಲಿ ಸುತ್ತಿಡುವುದರಿಂದ ಆಕ್ಸಿಡೀಕರಣ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಕಾರಣಗಳಿಗೆ ಚಿನ್ನವನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಇಡಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net