ಅಧಿಕ ವಿಮಾನ ಅಪಘಾತಗಳು ಟೇಕ್​ ಆಫ್​​ ಮತ್ತು ಲ್ಯಾಂಡಿಂಗ್​ ಸಮಯದಲ್ಲೇ ಸಂಭವಿಸುವುದು ಏಕೆ ..? ಇಲ್ಲಿದೆ ಮಾಹಿತಿ | Plane Accidents

dk - 2025-06-13T220109.517
Published on

Plane Accidents: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತ ಅಹಮದಾಬಾದ್​ ವಿಮಾನ ದುರಂತ ಸಾಕ್ಷಿಯಾಗಿದೆ. ಇದು ಬರಿ ಭಾರತವನಲ್ಲ ಇಡೀ ಜಗತ್ತನ್ನೇ ಬೆಚ್ಚಿಬಿಳಿಸಿದೆ. ಇದೀಗ ಎಲ್ಲರ ಮನಸ್ಸಿನಲ್ಲಿ ಸುತ್ತುತ್ತಿರುವ ಪ್ರಶ್ನೆ ಎಂದ್ರೆ ಅದು ‘ಅಧಿಕ ವಿಮಾನ ಅಪಘಾತಗಳು ಟೇಕ್​ ಆಫ್​​ ಮತ್ತು ಲ್ಯಾಂಡಿಂಗ್​ ಸಮಯದಲ್ಲೇ ಸಂಭವಿಸೊದೇಕೆ..? ಎಂದು. ವಿವಿಧ ದುರಂತಗಳ ಅಧ್ಯಯ ಹೇಳೋದೇನು ತಿಳಿಯೋಣ.

ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ(IATA) ದತ್ತಾಂಶ ಪ್ರಕಾರ, 2005ರಿಂದ 2023ರ ವರೆಗಿನ ಎಲ್ಲಾ ವಿಮಾನ ಅಪಘಾತಗಳಲ್ಲಿ ಅರ್ಥಕ್ಕಿಂತ ಹೆಚ್ಚು ಲ್ಯಾಂಡಿಂಗ್​(ಶೇ.53) ಸಮಯದಲ್ಲೇ ಅಪಘಾತ ಸಂಭವಿಸಿವೆ. ಇನ್ನು ಟೇಕ್​​ ಆಫ್​​ ಸಮಯದಲ್ಲಿ (ಶೇ.0.8) ಅಪಘಾತ ಸಂಭವನಿಯ ಎರಡನೇ ಸ್ಥಾನದಲ್ಲಿದೆ.

ಬೋಯಿಂಗ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2015 ಮತ್ತು 2024 ರ ನಡುವೆ ಸಂಭವಿಸಿದ ವಾಣಿಜ್ಯ ಜೆಟ್ ಅಪಘಾತಗಳಲ್ಲಿ 20% ಟೇಕ್‌ಆಫ್ ಹಂತದಲ್ಲಿ ಸಂಭವಿಸಿವೆ. ಈ ಅವಧಿಯಲ್ಲಿ, 47% ಅಪಘಾತಗಳು ಲ್ಯಾಂಡಿಂಗ್ ಹಂತದಲ್ಲಿ ಸಂಭವಿಸಿವೆ. ಈ ರೀತಿಯಾಗಿ, ಸುರಕ್ಷಿತ ಹಂತವು ಕ್ರೂಸ್ ಹಂತವಾಗಿದೆ, ಇದರಲ್ಲಿ ಕೇವಲ 10% ಅಪಘಾತಗಳು ಸಂಭವಿಸಿವೆ.

ಟೇಕ್​ ಆಫ್​​, ಲ್ಯಾಂಡಿಂಗ್ ಮಾರಕ ಏಕೆ..?

ವಿಮಾನ ಟೇಕ್​ ಆಫ್​​, ಲ್ಯಾಂಡಿಂಗ್ ಸಮಯದಲ್ಲೇ ಅಪಘಾತ ಅಧಿಕ ಎಂದು ಮೇಲೆ ನೋಡಿದ ದತ್ತಾಂಶಗಳ ಪ್ರಕಾರ ಸ್ಪಷ್ಟವಾಗಿದೆ. ಈ ಹಂತಗಳಲ್ಲಿ ಪೈಲಟ್‌ಗೆ ಪರಿಸ್ಥಿತಿಯನ್ನು ನಿಭಾಯಿಸಲು ಬಹಳ ಕಡಿಮೆ ಸಮಯವಿರುತ್ತದೆ. ಸರಳವಾಗಿ ಹೇಳುವುದಾದರೆ, ಈ ಎರಡು ಹಂತಗಳಲ್ಲಿ ವಿಮಾನವು ಕಡಿಮೆ ಎತ್ತರದಲ್ಲಿದೆ, ಆದ್ದರಿಂದ ಪೈಲಟ್‌ಗೆ ಅಪಘಾತವನ್ನು ತಪ್ಪಿಸಲು ಬಹಳ ಕಡಿಮೆ ಸಮಯವಿರುತ್ತದೆ.

ವಿಮಾನ 36,000 ಅಡಿ ಎತ್ತರದಲ್ಲಿದ್ದಾಗ ಪೈಲಟ್​ಗೆ ಸರಿಯಾದ ಮಾರ್ಗ ನಿರ್ಧಾರ ಮಾಡಲು ಸಾಕಷ್ಟು ಸಮಯವಿರುತ್ತದೆ. ಅಲ್ಲದೆ, ಈ ಸಮಯದಲ್ಲಿ ಎಂಜಿನ್​​ ಕೆಲಸ ಮಾಡದೇ ಕೈ ಕೊಟ್ಟರು, ವಿಮಾನ ಆಕಾಶದಿಂದ ಏಕಾಏಕಿ ಕೆಳಗೆ ಬೀಳುವುದಿಲ್ಲ. ಅದು ಗ್ಲೈಡರ್ ಆಗುತ್ತದೆ. ಈ ಪರಿಸ್ಥಿತಿಯಲ್ಲಿ, ಪೈಲಟ್‌ಗೆ ವಿಮಾನವನ್ನು ಇಳಿಸಲು ಸುಮಾರು ಎಂಟು ನಿಮಿಷಗಳಿವೆ. ಆದಾಗ್ಯೂ, ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಮಯದಲ್ಲಿ ಇದು ಸಂಭವಿಸಿದಲ್ಲಿ ಪೈಲಟ್‌ಗೆ ಬಹಳ ಕಡಿಮೆ ಸಮಯವಿರುತ್ತದೆ.

ಹೆಚ್ಚಿನ ವಿಮಾನ ಅಪಘಾತಗಳು, ವಿಶೇಷವಾಗಿ ಲ್ಯಾಂಡಿಂಗ್ ಹಂತದಲ್ಲಿ, ಪೈಲಟ್ ದೋಷದಿಂದಾಗಿ ಸಂಭವಿಸುತ್ತವೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ವಿಮಾನಗಳು ಕಡಿಮೆ ಎತ್ತರದಲ್ಲಿದ್ದಾಗ, ಪಕ್ಷಿಗಳಿಗೆ ಡಿಕ್ಕಿ ಹೊಡೆಯುವ ಮತ್ತು ಕೆಟ್ಟ ಹವಾಮಾನವನ್ನು ಎದುರಿಸುವ ಸಾಧ್ಯತೆ ಹೆಚ್ಚು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net