ನೀವೇಕೆ ಪಾಕಿಸ್ತಾನಕ್ಕೆ ಹೋಗಲಿಲ್ಲ ಎಂದು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು..!

classroom
Published on

ದೆಹಲಿ: ಭಾರತ ಹಾಗೂ ಪಾಕಿಸ್ತಾನ ವಿಭಜನೆಯಾದಾಗ ನೀವೇಕೆ ಪಾಕಿಸ್ತಾನಕ್ಕೆ ಹೋಗಲಿಲ್ಲ ಎಂದು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡಿದ್ದ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಾಗಿದೆ.


ದೆಹಲಿಯ ಶಾಲೆಯೊಂದರ 4 ವಿದ್ಯಾರ್ಥಿಗಳು, ತಮ್ಮ ಶಿಕ್ಷಕಿ ವಿರುದ್ಧ ಆರೋಪ ಮಾಡಿದ್ದಾರೆ.


9ನೇ ತರಗತಿ ವಿದ್ಯಾರ್ಥಿಗಳ ಕುಟುಂಬದವರು ನೀಡಿರುವ ಹೇಳಿಕೆ ಮೇರೆಗೆ ದೆಹಲಿ ಪೊಲೀಸರು ಗಾಂಧಿನಗರದ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಶಿಕ್ಷಕಿ ಹೇಮಾ ಗುಲಾಟೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ. ಶಿಕ್ಷಕರು ಯಾವುದೇ ಧಾರ್ಮಿಕ ಅಥವಾ ಪವಿತ್ರ ಸ್ಥಳದ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಕೂಡದು ಎಂದು ಶಾಸಕ ಅನಿಲ್ ಕುಮಾರ್ ಹೇಳಿದ್ದಾರೆ.


ಶಾಲೆಯಲ್ಲಿ ವೈಷಮ್ಯಕ್ಕೆ ಇಂತಹ ಹೇಳಿಕೆಗಳು ಕಾರಣವಾಗುತ್ತವೆ ಮತ್ತು ಶಿಕ್ಷಕರನ್ನು ವಜಾಗೊಳಿಸಬೇಕೆಂದು ವಿದ್ಯಾರ್ಥಿಗಳ ಕುಟುಂಬಗಳು ಒತ್ತಾಯಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net