ನಾರದರು ಏಕೆ ಸುಳ್ಳು ಹೇಳಿದರು?

Untitled design
Published on
 ನಾರದರು ಮಹಾಜ್ಞಾನಿಗಳು. ಅವರಿಗೆ ದೇವರ ಮಹಿಮೆ ಚೆನ್ನಾಗಿ ಗೊತ್ತು. ದೇವರಲ್ಲಿ ಒಂದೂ ದೋಷ ಇಲ್ಲ ಎಂದು ಚೆನ್ನಾಗಿ ತಿಳಿದವರು.ದೇವರ ಆಜ್ಞೆಯಂತೆ ನಡೆಯುವವರು. ದೇವರ ಮೈ ಹೊಲಸೇ ಆಗುವುದಿಲ್ಲ. ಆದರೂ ನಾವು ಅಭಿಷೇಕ ಯಾಕೆ ಮಾಡಬೇಕು? ಯಾವಾಗಲೂ ಅವನು ಸುಗಂಧಮಯ. ಅವನಿಗೇಕೆ ಗಂಧ ಹಚ್ಚಬೇಕು, ಕೋಟಿಸೂರ್ಯ ಪ್ರಕಾಶನಿಗೆ ಮಂಗಳಾರತಿ ಏಕೆ? ಈ ಎಲ್ಲ ಶಂಕೆಗೆ ಉತ್ತರ, ನಮ್ಮ ಸೇವೆ ಎಂಬ ಭಾವನೆಯಿಂದ ಮಾಡಬೇಕು ಎಂದು. ಹೀಗೆ ದೇವರು ನಿತ್ಯ ಅಪ್ರತಿಹತನಾದರೂ ಆ ಪರಮಾತ್ಮನಿಗೆ ಫಾತ ಮಾಡುವುದಕ್ಕೆ ಇವನು ಪ್ರಯತ್ನ ಮಾಡಬಾರದು ಅದರಿಂದ ನನಗೊಂದು ಸೇವೆ ಸಿಗಲಿ ಎಂದು ಮಾತ್ರ ನಾರದರು ಸುಳ್ಳು ಹೇಳಿದರೇ ಹೊರತು ದೇವರಿಗೆ ಅದರಿಂದ ಏನೂ ಆಗುತ್ತಿರಲಿಲ್ಲ ಎಂಬ ನಿರ್ಣಯವನ್ನು ಶ್ರೀಮದ್ ಆಚಾರ್ಯರು ಕೊಡುತ್ತಾರೆ.

ರುದ್ರದೇವರ ವರದಿಂದ ಅವಧ್ಯನಾಗುವುದಲ್ಲದೇ ಅವರಿಂದ ಗದೆಯನ್ನು ಪಡೆದಿದ್ದ, ಅದನ್ನು ಬೀಸಿ ಒಗೆದರೆ ಅದು ಕೆಳಗೆ ಬಿತ್ತು. ಮತ್ತೆ ಅದನ್ನು ಉಪಯೋಗಿಸದೇ ಇದ್ದರೆ ಕೆಲಸ ಆಗುತ್ತಿತ್ತು. ಕೃಷ್ಣ ಹೇಳುತ್ತಾನೆ: ನಾನು ಸಾಯಬೇಕು ಎಂದು ಕೊಂಡು ಒಗೆದಿದ್ದಾನೆ. ಇನ್ನು ಏಕೆ ಜರಾಸಂಧನ ಹತ್ತಿರ ಹೋಗಬೇಕು ಎಂದುಕೊಂಡು ಗದಾ ನೇರವಾಗಿ ಕೈಲಾಸದಲ್ಲಿದ್ದ ರುದ್ರದೇವರ ಹತ್ತಿರ ಹೋಗಿ ಸೇರಿಕೊಂಡು ಬಿಟ್ಟಿದೆ. ಜರಾಸಂಧನಿಗೆ ಗದೆಯೂ ಹೋಯಿತು, ತಾಯಿಯೂ ಹೋದಳು ಎಂದು ಒದ್ದಾಡುತ್ತಿದ್ದಾನೆ.

ಆಗ ಜರಾಸಂಧ, ಬಾಣಾಸುರನ ಹತ್ತಿರ ಬಂದ ನೋಡು ಹೀಗೆ ಎಲ್ಲ ಮೋಸ ಮಾಡಿ ಕೃಷ್ಣ ನನ್ನನ್ನು ಎರಡನೆಯ ಸಲವೂ ಸೋಲಿಸಿಬಿಟ್ಟ, ಏನಾದರೂ ಮಾಡು ಎಂದ. ಅವನೂ ಮಹಾದುಷ್ಟನೇ, ‘ಚತುರಂಗ ಸೈನ್ಯವನ್ನು ಕೊಡುತ್ತೇನೆ, ಮಾಯಾವಿಗಳಾಗಿ ಯುದ್ಧ ಮಾಡುವಂತಹ ಭಾರಿ ದಾನವರನ್ನು ಕೊಡುತ್ತೇನೆ. ಮಾಯಾವಿಗಳು ಮಾಯಾ ಸೃಷ್ಟಿಯನ್ನು ಮಾಡುತ್ತಾರೆ. ಅಂಥವರು ಒಬ್ಬೊಬ್ಬರೇ ಸಾಕು. ಭಾರೀ ಯುದ್ಧ ಮಾಡತಕ್ಕಂಥ ಮೂನ್ನೂರು ಮಾಯಾವಿಗಳನ್ನು ಕೊಡುತ್ತೇನೆ ಸಾಕು ತೆಗೆದುಕೊಂಡು ಹೋಗು’ ಎಂದು ಹೇಳಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net