

ಮೈಸೂರು: ‘ಬಾಹ್ಯಾಕಾಶದಲ್ಲಿ ಸೂರ್ಯ ಇದ್ದರೂ ಯಾಕೆ ಕತ್ತಲೆ’, ‘ಊಸರವಳ್ಳಿ ಹೇಗೆ ಬಣ್ಣ ಬದಲಿಸುತ್ತದೆ’, ‘ಗುರುತ್ವಾಕರ್ಷಣೆ ಭೂಮಿಗಷ್ಟೇ ಇದೆಯಾ’?…
ಮೈಸೂರು ವಿಶ್ವವಿದ್ಯಾಲಯ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಣ ಕೇಂದ್ರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿನ ಸೆಮಿನಾರ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಬಂದು ಕುತೂಹಲದ ಪ್ರಶ್ನೆಗಳಿವು.
ಅಷ್ಟೇ ಅಲ್ಲ, ‘ಮೂಗಿನಿಂದಲ್ಲೇ ಏಕೆ ಉಸಿರಾಡಬೇಕು’, ‘ವಿಮಾನ ಆಕಾಶದಲ್ಲಿ ಹೇಗೆ ಹಾರಾಡುತ್ತದೆ’ ಹೀಗೆ… ಅನೇಕ ಪ್ರಶ್ನೆಗಳನ್ನು ಕೇಳಿ ಪರಿಣಿತರಿಂದ ಉತ್ತರ ಪಡೆದುಕೊಂಡರು. ನಾನಾ ಕ್ಷೇತ್ರದಲ್ಲಿನ ಪರಿಣಿತರು ಶಾಲಾ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕುತೂಹಲ ತಣಿಸುವ ಪ್ರಯತ್ನ ಮಾಡಿದರು.