

ನಾನು 27ವರ್ಷದ ಬಿ.ಇ ಪದವಿಧರ. ಈಗ ನನ್ನ ದುಡಿಮೆ ಅಷ್ಟಕ್ಕಷ್ಟೆ. ಹೆಚ್ಚು ದುಡಿಯಬೇಕೆಂಬ ಆಸೆ. ಡಯಾಬಿಟೀಸ್ ಇರುವ ಕಾರಣ, ಮೆಡಿಕಲ್ ಟೆಸ್ಟ್ನಲ್ಲಿ ಫೇಲಾಗಿ ನನ್ನಿಷ್ಟದ ಸರ್ಕಾರಿ ಕೆಲಸ ನನಗೆ ಸಿಗಲ್ಲ. ನನ್ನ ಮದುವೆಯಾಗುವ ಆಸೆಗೂ ಡಯಾಬಿಟೀಸ್ ಅಡ್ಡಗಾಲು ಹಾಕುತ್ತಿದೆ. ಇದರಿಂದ ಎಲ್ಲದ್ದಕ್ಕೂ ಹಿಂಜರಿಕೆ. ನನ್ನ ಜತೆ ಓದಿದವರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇರಿಂದ ಡಿಪ್ರೆಷನ್ಗೆ ಒಳಗಾಗುತ್ತಿದ್ದೇನೇನೋ ಎನಿಸುತ್ತದೆ. ಪರಿಹಾರ ಇದೆಯೆ?
ಇನ್ನು ಹಣದ ವಿಷಯ. ಸಂಬಳ ಗಳಿಸುವ ವಿಚಾರದಲ್ಲಿ ನಿಮ್ಮನ್ನು ಮತ್ತೊಬ್ಬರೊಂದಿಗೆ ಹೋಲಿಸಿಕೊಳ್ಳಲೇ ಬೇಡಿ. ನಿಮಗೆ ಅವರು ತೆಗೆದುಕೊಳ್ಳುವ ಸಂಬಳ ಮಾತ್ರ ಕಾಣುತ್ತಿದೆ, ಅವರ ಇತರ ಒತ್ತಡಗಳು ನಿಮಗೆ ಕಾಣಿಸುವುದಿಲ್ಲ. ತುಂಬಾ ಹಣ ಸಂಪಾದಿಸುವವರು ಸುಖವಾಗಿರುತ್ತಾರೆ ಎಂದು ಭಾವಿಸುವುದು ನಮ್ಮ ಭ್ರಮೆಯಷ್ಟೆ! ನಿಮಗೆ ಈಗಿರುವ ಕೆಲಸ ನಿಮ್ಮ ಮನಸ್ಸಿಗೆ ಮೆಚ್ಚುಗೆಯಾಗಿದ್ದರೆ, ಹೆಚ್ಚು ಒತ್ತಡ ಭರಿತ ಕೆಲಸವಲ್ಲದಿದ್ದರೆ, ಇದರಲ್ಲೇ ಮುಂದುವರೆಯುವುದು ಸೂಕ್ತವಲ್ಲವೇ? ಸರಳ ಬದುಕನ್ನು ರೂಢಿಸಿಕೊಂಡವರಿಗೆ ನೆಮ್ಮದಿಯೆನ್ನುವುದು ಕರಗತವಾಗುತ್ತದೆ. ಹಣದ ಬೆನ್ನಟ್ಟಿದವರಿಗೆ ನೆಮ್ಮದಿ ಮರೀಚಿಕೆಯಾಗುತ್ತದೆ, ಮತ್ತು ಅದನ್ನು ಪಡೆಯಲು ಅದರ ಹಿಂದೆಯೇ ಓಡುತ್ತಲೇ ಇರಬೇಕಾಗುತ್ತದೆ. ವೈದ್ಯರ ಸಲಹೆ ಪಡೆದು ಉದ್ಯೋಗಸ್ಥ ಮಹಿಳೆಯನ್ನು ಮದುವೆಯಾಗಿ. ಇಬ್ಬರಿಗೂ ಬರುವ ಹಣದಲ್ಲಿ ನೆಮ್ಮದಿಯನ್ನು ಕಾಣಲು ಪ್ರಯತ್ನಿಸಿ. ಒಂದು ಮಾತು - ನಿಮಗೆ ಡಯಾಬಿಟೀಸ್ ಇರುವುದನ್ನು ಯಾವಕಾರಣಕ್ಕೂ ಹುಡುಗಿಯಿಂದ ಮುಚ್ಚಿಡಬೇಡಿ. ಇದನ್ನು ತಿಳಿದೇ ನಿಮ್ಮನ್ನು ಒಪ್ಪಿಕೊಳ್ಳುವ ಹುಡುಗಿಯನ್ನು ಮಾತ್ರ ಮದುವೆಯಾಗಿ. ನಮ್ಮ ನಾಡಿನಲ್ಲಿ ಲಕ್ಷ ಲಕ್ಷ ಜನರಿಗೆ ಡಯಾಬಿಟೀಸ್ ಇದೆ. ಅವರೆಲ್ಲರೂ ಸುಖವಾಗಿಯೇ ಬದುಕುತ್ತಿದ್ದಾರೆ. ಆದ್ದರಿಂದ ಡಯಾಬಿಟೀಸ್ ಎನ್ನುವ ಪದವನ್ನೇ ತಲೆಯಿಂದ ದೂರಮಾಡಿ ವೈದ್ಯರ ಸಲಹೆಯನ್ನು ತಪ್ಪದೇ ಪಾಲಿಸಿ. ಶುಭವಾಗಲಿ.