ಸೆಲೆಬ್ರಿಟಿಗಳು ರುದ್ರಾಕ್ಷಿ ಮಾಲೆಗಳನ್ನು ಧರಿಸುವುದೇಕೆ? ಓಹೋ ಇಷ್ಟೊಂದು ಲಾಭ ಸಿಗುತ್ತಾ? Rudraksha

Rudraksha
Published on

Rudraksha : ಅನೇಕ ಮಂದಿ ರುದ್ರಾಕ್ಷಿ ಮಾಲೆಗಳನ್ನು ಧರಿಸುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಕೂಡ ಈ ಮಾಲೆ ಧರಿಸುವುದನ್ನು ನೋಡಿರುತ್ತೇವೆ. ಕ್ರಿಕೆಟಿಗ ವಿರಾಟ್​ ಕೊಹ್ಲಿ, ನಟ ಧನುಷ್​ ಮತ್ತು ನಟಿ ಸಮಂತಾ ಸೇರಿದಂತೆ ಪ್ರಮುಖ ಸೆಲೆಬ್ರಿಟಿಗಳು ರುದ್ರಾಕ್ಷಿ ಮಾಲೆ ಧರಿಸುತ್ತಾರೆ. ಅಷ್ಟಕ್ಕೂ ರುದ್ರಾಕ್ಷಿ ಧಾರಣೆಯಿಂದ ಏನು ಲಾಭ? ಇದರ ಮಹತ್ವವೇನು? ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಅಂದಹಾಗೆ ರುದ್ರಾಕ್ಷ ಎಂಬ ಪದವು ಎರಡು ಪದಗಳಿಂದ ಬಂದಿದೆ. ರುದ್ರ ಎಂದರೆ ಕಣ್ಣೀರು ಮತ್ತು ಅಕ್ಷ ಎಂದರೆ ಕಣ್ಣುಗಳು. ಹೀಗಾಗಿ ದಂತಕಥೆಗಳಲ್ಲಿ ರುದ್ರಾಕ್ಷವು ಅಕ್ಷರಶಃ "ಶಿವನ ಕಣ್ಣೀರು" ಎಂದು ಹೇಳಲಾಗುತ್ತದೆ. ಈ ರುದ್ರಾಕ್ಷ ಕೇವಲ ಮಣಿಯಲ್ಲ. ಆಧ್ಯಾತ್ಮಿಕವಾಗಿ ಅದಕ್ಕೆ ಬಹಳ ಶಕ್ತಿ ಇದೆ.

ರುದ್ರಾಕ್ಷಿ ಧಾರಣೆಯು ಹೆಚ್ಚಿನ ಆಧ್ಯಾತ್ಮಿಕ ಪ್ರಯೋಜನಗಳನ್ನು ತರುತ್ತದೆ. ರುದ್ರಾಕ್ಷಿಯನ್ನು ದೇವರ ಕೊಡುಗೆ ಎಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ದುರಾದೃಷ್ಟ ದೂರವಾಗುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ. ಇದು ದೇಹದಲ್ಲಿನ ಏಳು ಚಕ್ರಗಳ ನಡುವೆ ಸಮತೋಲನವನ್ನು ಸೃಷ್ಟಿಸುತ್ತದೆ. ಇದರಿಂದ ಅನೇಕ ಸಮಸ್ಯೆಗಳಿಂದ ಹೊರಬರಬಹುದು.

ಇನ್ನು ರುದ್ರಾಕ್ಷಿ ಧರಿಸುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ನಮ್ಮಲ್ಲಿ ಹಾಗೂ ನಮ್ಮ ಸುತ್ತಲೂ ಇರುವ ಯಾವುದೇ ನಕಾರಾತ್ಮಕ ಶಕ್ತಿಯನ್ನು ರುದ್ರಾಕ್ಷಿ ಸಂಪೂರ್ಣವಾಗಿ ತೆಗೆದುಹಾಕುತ್ತದೆ. ರುದ್ರಾಕ್ಷಿಗಳಿಂದ ಆಧ್ಯಾತ್ಮಿಕತೆಯನ್ನು ಹೆಚ್ಚಿಸಬಹುದು.

ರುದ್ರಾಕ್ಷಿ ಧರಿಸುವುದರಿಂದ ಮನಸ್ಸು ತುಂಬಾ ಶಾಂತವಾಗಿರುತ್ತದೆ ಮತ್ತು ಆರಾಮದಾಯಕ ಅನಿಸುತ್ತದೆ. ರುದ್ರಾಕ್ಷಿಯು ಆತ್ಮಜ್ಞಾನಕ್ಕೆ ಕಾರಣವಾಗುತ್ತದೆ. ಪರಮಾತ್ಮನಿಗೆ ಹತ್ತಿರವಾಗುವಂತೆ ಮಾಡುತ್ತದೆ. ಅಲ್ಲದೆ ರುದ್ರಾಕ್ಷಿ ಧರಿಸುವುದರಿಂದ ಯಾವುದೇ ಜಾತಕ ದೋಷಗಳು ನಿವಾರಣೆಯಾಗುತ್ತದೆ ಮತ್ತು ಲಾಭವನ್ನು ತರುತ್ತದೆ.

ಇದಿಷ್ಟೇ ಅಲ್ಲದೆ, ಹಿಂದಿನ ಜನ್ಮದ ಪಾಪಗಳನ್ನು ತೊಡೆದುಹಾಕಲು ಸಹ ರುದ್ರಾಕ್ಷಿ ಉಪಯುಕ್ತವಾಗಿದೆ. ರುದ್ರಾಕ್ಷಿಯಲ್ಲಿ ಇಷ್ಟೆಲ್ಲ ಪ್ರಯೋಜನಗಳಿರುವುದರಿಂದಲೇ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಜನರು ರುದ್ರಾಕ್ಷಿ ಮಾಲೆಯನ್ನು ಧರಿಸುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ. ಹಾಗೆಯೇ ಮೇಲಿನ ನಿಯಮಗಳು ಸಾಂಪ್ರದಾಯಿಕ ಚಿಂತನೆಯನ್ನು ಆಧರಿಸಿವೆ ಹೊರತು ವಿಜ್ಞಾನದಿಂದ ಬೆಂಬಲಿತವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net