ಆಫ್ರಿಕನ್​ ಮಗುವಿಗೆ ಜನ್ಮ ನೀಡಿದ ಅಮೆರಿಕನ್​ ಯುವತಿ: ಇದಕ್ಕೆ ಆ ಒಂದು ಮಿಸ್ಟೇಕ್ ಕಾರಣವಂತೆ! Wedding Photographer

Wedding Photographer
Published on

Wedding Photographer : ವೆಡ್ಡಿಂಗ್​ ಫೋಟೋಗ್ರಾಫರ್ ಆಗಿರುವ​ ಯುವತಿಯೊಬ್ಬಳು ತನ್ನ ಗರ್ಭಧಾರಣೆ ಮತ್ತು ಹೆರಿಗೆಗೆ ಸಂಬಂಧಿಸಿದ ಮನಕಲಕುವ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾಳೆ.

ಒಂದು ಮಗುವಿಗೆ ತಾಯಿಯಾಗುವ ತನ್ನ ಮಹಾನ್ ಆಸೆಯನ್ನು ಈಡೇರಿಸಿಕೊಳ್ಳಲು ಯುವತಿ, ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದಳು. ಆದರೆ, ತಿಂಗಳುಗಳ ನಂತರ, ತಾನು ಬೇರೊಬ್ಬರ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ತಿಳಿದಾಗ, ಮಗುವನ್ನು ಅದರ ನಿಜವಾದ ಪಾಲಕರಿಗೆ ಆಕೆ ಒಪ್ಪಿಸಿದ್ದಾಳೆ.

ಯುವತಿಯ ಹೆಸರು ಕ್ರಿಸ್ಟಿನಾ ಮುರ್ರೆ. 2023ರ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಟಿನಾ ಅವರು ಗರ್ಭಿಣಿಯಾಗಲು ಐವಿಎಫ್​ಗೆ ಒಳಗಾದರು. ಇದಕ್ಕಾಗಿ ಆಕೆ ಕೋಸ್ಟಲ್ ಫರ್ಟಿಲಿಟಿ ಸ್ಪೆಷಲಿಸ್ಟ್​ ಎಂಬ ಐವಿಎಫ್​ ಕ್ಲಿನಿಕ್ ಅನ್ನು ಸಂಪರ್ಕಿಸಿದರು. ಮುರ್ರೆ ಬಿಳಿಯರಾಗಿರುವುದರಿಂದ ಐವಿಎಫ್​ಗಾಗಿ ಬಿಳಿ ವ್ಯಕ್ತಿಯಿಂದ ವೀರ್ಯವನ್ನು ಪಡೆದರು.

ಆದರೆ, ಕ್ರಿಸ್ಟಿನಾ ಜನ್ಮ ನೀಡಿದ ಮಗು ಆಫ್ರಿಕನ್-ಅಮೆರಿಕನ್ ಮೂಲದ್ದು. ಇದರಿಂದ ಆಘಾತಕ್ಕೆ ಒಳಗಾದ ಮುರ್ರೆ, ಡಿಎನ್ಎ ಪರೀಕ್ಷೆ ಮಾಡಲು ನಿರ್ಧರಿಸಿದರು. ಪರೀಕ್ಷೆಯಲ್ಲಿ ಮಗುವಿಗೆ ಜನ್ಮ ನೀಡಿದ್ದನ್ನು ಬಿಟ್ಟರೆ, ಮುರ್ರೆಗೂ ಮಗುವಿಗೂ ಬೇರೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂತು. ಮಗುವಿನ ಪಾಲಕರು ಬೇರೆ ಜನಾಂಗದವರು ಎಂಬುದು ದೃಢವಾಯಿತು. ಹೀಗಾಗಿ ಕ್ರಿಸ್ಟಿನಾ ಮಗುವನ್ನು ಅದರ ನಿಜವಾದ ಪಾಲಕರಿಗೆ ಹಸ್ತಾಂತರಿಸಲು ಸಿದ್ಧರಾದರು. ಮಗುವಿನ ನಿಜವಾದ ಪಾಲಕರು ಸಹ ಮಗುವನ್ನು ಸ್ವೀಕರಿಸಿದ್ದಾರೆ.

ಇದಕ್ಕೆ ಐವಿಎಫ್ ಕ್ಲಿನಿಕ್‌ ಮಾಡಿದ ಮಿಸ್ಟೇಕ್​ ಕಾರಣ ಎಂದು ಮುರ್ರೆ ಹೇಳಿದ್ದಾರೆ. ಮುರ್ರೆ ಅವರು ತನ್ನದಲ್ಲದ ಭ್ರೂಣವನ್ನು ತನ್ನ ಗರ್ಭಾಶಯದಲ್ಲಿ ಅಳವಡಿಸಿದ್ದಕ್ಕಾಗಿ ಕ್ಲಿನಿಕ್ ವಿರುದ್ಧ ದೂರು ದಾಖಲಿಸಿದ್ದಾಳೆ. ಮಗು ಜನಿಸಿದಾಗ ತಾನು ಸಂತೋಷಪಟ್ಟೆ. ಆದರೆ, ಮಗುವಿನ ಬಗ್ಗೆ ತಿಳಿದಾಗ ನನಗೆ ತುಂಬಾ ನೋವಾಯಿತು. ಆಸ್ಪತ್ರೆಯ ಕಡೆಯಿಂದ ನಡೆದದ್ದು ದೊಡ್ಡ ಪಾಪ ಮತ್ತು ಎಂದಿಗೂ ಸಂಭವಿಸಬಾರದ ಸಂಗತಿ ಎಂದು ಮುರ್ರೆ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net