Water Bottle : ತೀವ್ರ ಶಾಖಕ್ಕೆ ಒಡ್ಡಿಕೊಳ್ಳುವ ಬಾಟಲಿ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳು ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪ್ರಮುಖ ಸಮಸ್ಯೆ ಏನೆಂದರೆ, ಬಿಸಿಲಿನಲ್ಲಿ ವಾಹನಗಳಲ್ಲಿ ವಾಟರ್ ಬಾಟಲ್ ಮತ್ತು ಕೋಲಾ ಇತ್ಯಾದಿಗಳನ್ನು ಅಂಗಡಿಗಳಿಗೆ ತರಲಾಗುತ್ತದೆ. ವಿಪರೀತ ಶಾಖದಿಂದಾಗಿ ಬಾಟಲಿಯಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಯೇ ನಮ್ಮ ಆರೋಗ್ಯಕ್ಕೆ ಡೇಂಜರ್.
ಬಿಸಿಲಿನಲ್ಲಿ ನೀರಿನ ಬಾಟಲಿಯಲ್ಲಿ ಪ್ಲಾಸ್ಟಿಕ್ ಕೂಡ ಬೆರೆಯಬಹುದು. ಇದು ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ನೀರಿನೊಂದಿಗೆ ಬೆರೆತ ಪ್ಲಾಸ್ಟಿಕ್ ರಕ್ತದಲ್ಲಿ ಸೇರಿಕೊಂಡರೆ ಅನೇಕ ರೋಗಗಳು ಉಲ್ಬಣಗೊಳ್ಳುತ್ತದೆ. ಹೀಗಾಗಿ ನಿಯಮಿತವಾಗಿ ಬಾಟಲಿ ನೀರನ್ನು ಕುಡಿಯುವವರು ಜಾಗರೂಕರಾಗಿರಬೇಕು ಎಂದು ತಜ್ಞರು ಹೇಳುತ್ತಾರೆ.
ಪ್ಲಾಸ್ಟಿಕ್ ಮತ್ತು ಅಂಟು ಡೇಂಜರ್
ಕುಡಿಯುವ ನೀರಿನ ಬಾಟಲಿಗಳನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಬಾಟಲಿ ಉತ್ಪಾದನೆಯನ್ನು ಲಾಭದಾಯಕವಾಗಿಸಲು, ಪಿಇಟಿಗೆ ಕಡಿಮೆ ಗುಣಮಟ್ಟದ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಪಿಇಟಿ, ಶುದ್ಧ ಪ್ಲಾಸ್ಟಿಕ್ ಆಗಿದ್ದರೂ ಸಹ, ಬಿಸಿ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟು ಮಾಡಬಹುದು. ಅಂತಹ ಬಾಟಲಿ ನೀರನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ರಾಸಾಯನಿಕ ಬದಲಾವಣೆಯಿಂದಾಗಿ ಪ್ಲಾಸ್ಟಿಕ್ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಅದನ್ನು ಬರಿಗಣ್ಣಿನಲ್ಲಿ ನೋಡಲು ಆಗುವುದಿಲ್ಲ. ಇನ್ನು ಬಾಟಲಿಯ ಹೊರಭಾಗದಲ್ಲಿ ಪಾಲಿಥಿಲೀನ್ ಲೇಬಲ್ ಅನ್ನು ಅಂಟಿಸಲು ಬಳಸುವ ಅಂಟು ಕೂಡ ಡೇಂಜರ್. ಬಿಸಿ ಮಾಡಿದಾಗ ಅಂಟು ಕೂಡ ನೀರಿನಲ್ಲಿ ಸ್ವಲ್ಪ ಹೀರಲ್ಪಡುತ್ತದೆ.
ಪರೀಕ್ಷೆ ಮಾಡುವುದಿಲ್ಲ
ಆಹಾರ ಸುರಕ್ಷತಾ ಇಲಾಖೆಗಳು ಗೋದಾಮಿನಲ್ಲಿ ಮಾತ್ರ ಗುಣಮಟ್ಟದ ಪರಿಶೀಲನೆ ನಡೆಸುತ್ತದೆ ಹೊರತು ಅಂಗಡಿಗಳಿಂದ ಬಾಟಲಿ ನೀರನ್ನು ವಶಪಡಿಸಿಕೊಳ್ಳುವುದಿಲ್ಲ. ಗೋದಾಮಿನಿಂದ ಅಂಗಡಿಗಳಿಗೆ ತರುವಾಗ ಬಿಸಿಲಿನಲ್ಲಿ ಸಾಗಿಸಲಾಗುತ್ತದೆ. ಅಲ್ಲದೆ, ಕೆಲ ಅಂಗಡಿಗಳಲ್ಲೂ ಬಿಸಿಲಿನಲ್ಲಿ ಇಡಲಾಗುತ್ತದೆ. ಅವುಗಳನ್ನು ಖರೀದಿಸಿ ಕುಡಿದಾಗ ಆರೋಗ್ಯ ಹದಗೆಡುತ್ತದೆ.
ಅನುಸರಿಸಬೇಕಾದ ಸೂಚನೆಗಳು
* ಮುಚ್ಚಿದ ವಾಹನಗಳಲ್ಲಿ ಬಾಟಲ್ ನೀರನ್ನು ವಿತರಿಸಬೇಕು.
* ತೆರೆದ ಪ್ರದೇಶದಲ್ಲಿ ಸಂಗ್ರಹಿಸುವಾಗ ಸೂರ್ಯನ ಬೆಳಕಿಗೆ ಒಡ್ಡಬಾರದು.
ಅಂದಹಾಗೆ ಬಾಟಲ್ ನೀರನ್ನು ಬಿಸಿಲಿಗೆ ಒಡ್ಡುವ ರೀತಿಯಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ಸಂಸ್ಥೆಗಳು ಮತ್ತು ವಾಹನಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. (ಏಜೆನ್ಸೀಸ್)
ಅಲರಾಂ ಇಲ್ಲದೇ ಬೆಳಗ್ಗೆ ಬೇಗ ಏಳುವುದು ಹೇಗೆ? ಇಲ್ಲಿವೆ ನೋಡಿ ಕೆಲವು ಬೆಸ್ಟ್ ಟಿಪ್ಸ್! Alarm
ಹೇಳಿದ ಸಮಯಕ್ಕೆ ಸಿನಿಮಾ ಆರಂಭಿಸದೇ ಅತಿಯಾಗಿ ಜಾಹೀರಾತು ಪ್ರದರ್ಶಿಸಿದ ಪಿವಿಆರ್ಗೆ ಬಿತ್ತು ಭಾರಿ ದಂಡ! PVR