

ಈ ಸಲ ಆರ್ಕಿಟೆಕ್ಚರ್ ಕುರಿತು ಗಮನ ಹರಿಸೋಣ.ಆರ್ಕಿಟೆಕ್ಚರ್ ಯಾರಿಗೆ ಬೇಕು? ಯಾವ ರೀತಿಯಲ್ಲಿ ಬೇಕು? ಎಂದು ಪ್ರಶ್ನೆ ಮಾಡಿದರೆ ಎಲ್ಲರಿಗೂ ಬೇಕು. ವೃದ್ಧರು, ಮಕ್ಕಳು, ಹಿರಿಯರು, ಮಹಿಳೆಯರಿಗೂ ಬೇಕು. ಗೋದಾಮು, ಕೈಗಾರಿಕೆಯಲ್ಲಿ, ಆಸ್ಪತ್ರೆಯ ರೋಗಿಗಳಿಗೂ ಬೇಕು. ಯಾರಿಗೆಬೇಕೆಂಬ ಪ್ರಶ್ನೆಗಿಂತ ಎಲ್ಲ ರೀತಿಯ ಪ್ರಾಣಿ ಮತ್ತು ಮನುಷ್ಯನಿಗೆ ಬೇಕು ಎಂದು ಹೇಳುತ್ತೇನೆ. ಎಲ್ಲರಿಗೂ ಒಂದೇ ರೀತಿ ಆರ್ಕಿಟೆಕ್ಚರ್ ಕೊಡಲು ಬರುತ್ತದೆಯೇ ಎಂದು ಪ್ರಶ್ನಿಸಿದರೆ, ಸಣ್ಣ ಉದಾಹರಣೆ ಮೂಲಕ ಉತ್ತರಿಸಬಹುದು. ಒಂದು ಕಟ್ಟಡ ಎಂಬುದನ್ನು ನಾಲ್ಕು ಭಾಗ ಮಾಡಿ ಕೊಠಡಿ ಎಂದು ಪರಿಗಣಿಸಿದಾಗ ಸೂರ್ಯ ಪ್ರಮುಖ ಪಾತ್ರ ವಹಿಸುತ್ತಾನೆ. ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಆದರೆ, ಸೂರ್ಯ ಪೂರ್ವದಲ್ಲಿ ಹುಟ್ಟಿದಾಗ ಪೂರ್ವದಲ್ಲಿ ಬರುವ ಬೆಳಕೇ ಬೇರೆ, ಪಶ್ಚಿಮದ ಬೆಳಕೇ ಬೇರೆ. ಸೂರ್ಯ ಉತ್ತರಾಯಣ, ದಕ್ಷಿಣಾಯಣದಲ್ಲಿದ್ದಾಗ ಬರುವ ಬೆಳಕೇ ಬೇರೆ.
ಸೂರ್ಯನ ಕಿರಣಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಗುಣಮಟ್ಟ ಬೇರೆ ಬೇರೆ ಬರುತ್ತದೆ. ಇಲ್ಲಿ ಕೆಟ್ಟದ್ದು ಒಳ್ಳೆಯದ್ದು ಎಂಬ ಪ್ರಶ್ನೆಯಲ್ಲ. ಇಲ್ಲಿ ಸೂರ್ಯನ ಬೆಳಕಿನ ಗುಣಮಟ್ಟ ಬೇರೆಬೇರೆಯದಾಗಿರುತ್ತದೆ. ಆ ಅಂಶವನ್ನು ಕಟ್ಟಡವನ್ನು ಆಧಾರವಾಗಿಟ್ಟುಕೊಂಡು ವಿಶ್ಲೇಷಣೆ ಮಾಡಿದಾಗ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಎಂದು ನಾಲ್ಕು ವಿಭಜನೆಯಾಗುತ್ತದೆ. ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ಎಂದು ಪರಿಗಣಿಸಿದಾಗ ಎಷ್ಟು ಅರ್ಥಗರ್ಭಿತ ಶಬ್ದಗಳು ಇವೆ. ಈಶಾನ್ಯಕ್ಕೆ ನಾರ್ಥ್ ಈಸ್ಟ್ ಎನ್ನುತ್ತೇವೆ. ಏನಿದರ ಅರ್ಥ? ಪೂರ್ವ ಮತ್ತು ದಕ್ಷಿಣದ ಮಧ್ಯ ಭಾಗ ಆಗ್ನೇಯ. ಆದರೆ ಪೂರ್ವ ದಕ್ಷಿಣ ಭಾಗಕ್ಕೆ ಸೌತ್ ಈಸ್ಟ್ ಎನ್ನುತ್ತೇವೆ, ಆದರೆ ಅಲ್ಲಿ ಆಗ್ನೇಯ ಎಂಬ ಅರ್ಥ ಬರುವುದಿಲ್ಲ.
ಆಗ್ನೇಯ, ಈಶಾನ್ಯ, ವಾಯುವ್ಯ, ನೈರುತ್ಯ ಎಂದು ಸುಮ್ಮನೆ ಹೆಸರು ಕೊಟ್ಟಿಲ್ಲ. ಅದು ವಿಭಾಗದಲ್ಲಿ ಸೃಷ್ಟಿಸುವ ಅಥವಾ ಗುಣ ಹೊರಹಾಕುವ ಎನರ್ಜಿಗಳ ಸಂಕೀರ್ಣ ಸಂಯೋಜನೆ. ಈಶಾನ್ಯ ಹೆಚ್ಚು ಹಿತಕರ ವಿಭಾಗ. ಮನುಷ್ಯ ಶಾಶ್ವತವಲ್ಲ. ಆದರೆ, ದೀರ್ಘಕಾಲ ಬಾಳಿ ಬದುಕಬೇಕೆಂದರೆ ಈಶಾನ್ಯದಲ್ಲಿ ಹೆಚ್ಚು ಸಮಯಇರಬೇಕು. ಅಂದರೆ ವೃದ್ಧರು, ಮಕ್ಕಳು ಅಲ್ಲಿ ಇರಬೇಕಾಗುತ್ತದೆ. ನಾಲ್ಕು ಭಾಗಗಳನ್ನು ವಿಶ್ಲೇಷಿಸಿದರೆ, ನಾಲ್ಕು ಭಾಗದಲ್ಲಿ ಶಕ್ತಿಯ ಸಂಕೀರ್ಣ ಬೇರೆಯದೇ ಇರುತ್ತದೆ.
ಈಶಾನ್ಯದಲ್ಲಿ ಮನುಷ್ಯ ಕುಳಿತು ಸಮಯ ಕಳೆದರೆ ಬುದ್ಧಿಮತ್ತೆ ಹೆಚ್ಚಾಗುತ್ತದೆ. ವಾಯುವ್ಯಕ್ಕೆ ಅರ್ಥವಿದೆ, ಅಲ್ಲಿ ಗಾಳಿ ಸಂಯೋಜನೆ ಜಾಸ್ತಿ ಇದೆ. ಪಂಚ ಮಹಾಭೂತಗಳಾದ ಪೃಥ್ವಿ (ಭೂಮಿ), ಅಪಸ್ (ನೀರು), ಅಗ್ನಿ (ಬೆಂಕಿ), ವಾಯು, ಆಕಾಶದ ಪೈಕಿ ಗಾಳಿಯ ಕಾಂಪೋನೆಂಟ್ ಜಾಸ್ತಿ ಇದೆ, ಅಲ್ಲಿ ಮನುಷ್ಯ ಬಲಶಾಲಿಯಾಗುತ್ತಾನೆ. ಅವನು ಶರೀರದ ಬಗ್ಗೆ ವಿಚಾರ ಮಾಡುತ್ತದೆ. ಅದು ಕ್ಷತ್ರಿಯ ಗುಣ ಬೆಳೆಸುತ್ತದೆ. ಈ ನಾಲ್ಕು ವಿಭಜನೆಗಳು, ಡಿವಿಜನ್, ಮನುಷ್ಯನ ಗುಣಲಕ್ಷಣ, ಎನರ್ಜಿ ಸಂಯೋಜನೆಯಿಂದ ಆಗುತ್ತದೆ ಹೊರತು ನನ್ನ ನೇಚರ್ ಎಂಬುದು ತಪ್ಪು.
ಉದಾಹರಣೆಗೆ ಯಾವುದೇ ಹುಡುಗ ಅಧ್ಯಯನ ಮಾಡುತ್ತಿಲ್ಲ ಎಂದಾದರೆ ಆತನನ್ನು ಈಶಾನ್ಯಕ್ಕೆ ಹಾಕಿದರೆ ಅವನಿಗೆ ಗ್ರಹಣ ಶಕ್ತಿ ಬೆಳೆಯುತ್ತದೆ. ಈ ಆರ್ಕಿಟೆಕ್ಚರ್ ಮನುಷ್ಯನ ಬೇರೆ ಬೇರೆ ವೃತ್ತಿ ಅಥವಾ ವಯಸ್ಸಿಗೆ ಸಂಬಂಧಿಸಿದಂತೆ ಬೇರೆ ಬೇರೆಯದಾಗಿ ಪರಿಗಣಿತವಾಗುತ್ತದೆ. ಮನೆಯಲ್ಲಿ ಸಹಜವಾಗಿ ಕರ್ತವ್ಯ ಹಂಚಿಕೆಯಾಗಿರುತ್ತದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವವರು ಬೇರೆ, ಮನೆ ಒಡೆಯ ಬೇರೆ, ಮಕ್ಕಳ ಕೆಲಸ ಬೇರೆ ಇರುತ್ತದೆ. ಅವರು ಓದಬೇಕು, ಅಭ್ಯಾಸ ಮಾಡಿ ಮುಂದೆ ಬರಬೇಕು. ಈ ರೀತಿ ವಿಭಜನೆ ಮಾಡಲು ಸೂರ್ಯ ಕಾರಣ.
ಸೂರ್ಯನಿಂದ ಬರುವ ಐದು ಶಕ್ತಿಗಳು ಭೂಮಿಗೆ ಬಂದಿದ್ದು ಸೂರ್ಯನಿಂದ. ತನ್ನ ಬೇರೆ ಬೇರೆ ಚಟುವಟಿಕೆ ಯಾವ ರೀತಿ ಸಿದ್ಧಪಡಿಸಬೇಕೆಂಬುದು ಮುಖ್ಯ. ಒಂದು ಕೈಗಾರಿಕೆ ಒಡೆಯ ಎಲ್ಲಿರಬೇಕು? ಎಂದರೆ ಒಳ್ಳೆ ರೀತಿ ಕೆಲಸ ತೆಗೆದುಕೊಳ್ಳಲು ನೈರುತ್ಯದಲ್ಲಿ ಇರಬೇಕು. ಈ ರೀತಿ ಅರ್ಥೈಸಿದ ವಿಜ್ಞಾನವನ್ನು ನಾವು ಮರೆತುಬಿಟ್ಟಿದ್ದೇವೆ.
(ಲೇಖಕರು ಸುಪ್ರಸಿದ್ಧ ವಾಸ್ತು ಶಾಸ್ತ್ರಜ್ಞರು)