ಯಾರಿಗೆ ಸಿಗಲಿದೆ ರಾಜ್ಯಸಭೆ ಅವಕಾಶ?

Parliment vvani
Published on

ಬೆಂಗಳೂರು: ಮುಂದಿನ ಮೇ-ಜೂನ್​ನಲ್ಲಿ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದ ಯಾರಿಗೆ ಅವಕಾಶ ಸಿಗಲಿದೆ, ಯಾರಿಗೆ ಕೈ ತಪ್ಪಲಿದೆ ಎಂಬ ಚರ್ಚೆ ಶುರುವಾಗಿದೆ.

ಬಿ.ಕೆ.ಹರಿಪ್ರಸಾದ್, ರಾಜೀವ್ ಗೌಡ, ಪ್ರಭಾಕರ ಕೋರೆ, ಕುಪೇಂದ್ರ ರೆಡ್ಡಿ ರಾಜ್ಯಸಭಾ ಅವಧಿ ಜೂನ್​ನಲ್ಲಿ ಮುಕ್ತಾಯವಾಗಲಿದ್ದು, ಈ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ನಾಲ್ಕು ಸ್ಥಾನಗಳಿಗೆ ಒಟ್ಟಿಗೆ ಅಧಿಸೂಚನೆ ಹೊರಟಲ್ಲಿ ಸರಾಸರಿ 45 ಮತಗಳಿಗೆ (ಶಾಸಕರು) ಒಂದು ಸ್ಥಾನ ಗೆಲ್ಲಬಹುದು. ವಿಧಾನಸಭೆ ಹಾಲಿ ಬಲಾಬಲದ ಪ್ರಕಾರ ಬಿಜೆಪಿ-2, ಕಾಂಗ್ರೆಸ್-1 ಸ್ಥಾನ ಗೆಲ್ಲಬಹುದು. ಜೆಡಿಎಸ್​ನಲ್ಲಿ 34 ಶಾಸಕರಿದ್ದು, ಹಾಲಿ ಒಂದು ಸ್ಥಾನ ಉಳಿಸಿಕೊಳ್ಳಲು ಆ ಪಕ್ಷದ ಅಭ್ಯರ್ಥಿ ಬಿಜೆಪಿಯ ಹೆಚ್ಚುವರಿ ಮತ ಅಥವಾ ಕಾಂಗ್ರೆಸ್​ನ ಹೆಚ್ಚುವರಿ ಮತ ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ. ಕಾಂಗ್ರೆಸ್​ಗೆ ಸಿಗುವ ಒಂದು ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಪುನಾರಾಯ್ಕೆ ಬಯಸಿದ್ದಾರೆ. ಆದರೆ, ಹಾಲಿ ಸದಸ್ಯ ರಾಜೀವ್ ಗೌಡ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಲು ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಬಯಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜೀವ್ ಗೌಡ ಪಕ್ಷದ ಸಂಶೋಧನಾ ವಿಭಾಗ ಮುನ್ನಡೆಸುತ್ತಿದ್ದು, ಪಕ್ಷಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಿದ್ದಾರೆಂಬ ಮಾತು ಪಕ್ಷದಲ್ಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಕಳಿಸಲು ಪಕ್ಷ ಬಯಸಿದೆ. ಬಿಜೆಪಿ ಪ್ರಭಾಕರ ಕೋರೆಯವರನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದ್ದು, ಇನ್ನೊಂದು ಸ್ಥಾನಕ್ಕೆ ಪಕ್ಷ ನಿಷ್ಠರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆಗೆ ಆಯ್ಕೆ ಮಾಡುವ ತೀರ್ಮಾನ ಹೈಕಮಾಂಡ್​ಗೆ ಬಿಟ್ಟದ್ದು. ಹೈಕಮಾಂಡ್ ತೆಗೆದುಕೊಂಡ ತೀರ್ವನಕ್ಕೆ ಬದ್ಧ್ದ ಹಾಗಂತ ಆಯ್ಕೆ ಮಾಡುತ್ತಾರೆ, ಬಿಡುತ್ತಾರೆ ಎಂಬ ವಿಚಾರವನ್ನು ಅಲ್ಲಿ ಇಲ್ಲಿ ಹೇಳಿಕೊಂಡು ಓಡಾಡೋದಿಲ್ಲ. | ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net