

ಹಾಗೆಯೇ ನನಗೆ ನೀವು ಮಾಡಿದ ಉಪಕಾರ ತುಂಬ ದೊಡ್ಡದು’ ಎಂದು ಕೃಷ್ಣ ಅವರಿಗೆ ಹೇಳುತ್ತಾನೆ. ಕೃಷ್ಣ ಪರಮಾತ್ಮನಿಗೆ ಇನ್ನೂ ಉಪನಯನ ಸಂಸ್ಕಾರವೇ ಆಗಿಲ್ಲ. ನೀಲಾಳ ಜೊತೆಗೆ ಮದುವೆ ಆಗಿದೆ. ಏಕೆ ಉಪನಯನ ಸಂಸ್ಕಾರ ಮಾಡಿಕೊಳ್ಳಲಿಲ್ಲ? ಎಲ್ಲ ಅಸುರರ ಸಂಹಾರ ಆಯಿತು. ಕಂಸನ ಸಂಹಾರ ಆಗಿದೆ. ಎಲ್ಲವನ್ನೂ ಮಾಡಿ ಮುಗಿಸಿದನಾದರೂ ಕೃಷ್ಣ ಪರಮಾತ್ಮ ಉಪನಯನವನ್ನೇ ಮಾಡಿಕೊಂಡಿರಲಿಲ್ಲ. ಅಂದರೆ ಅಷ್ಟೊ ತ್ತಿಗೆ ಇಪತ್ತು, ಇಪತೆôದು, ಮೂವತ್ತು ವಯಸ್ಸು ಎಂದು ತಿಳಿದುಕೊಳ್ಳಬೇಡಿ.
ಶ್ರೀಕೃಷ್ಣ ಎಷ್ಟು ಬಲಶಾಲಿ ಅಂದರೆ ಎಂಟು ವರ್ಷದೊಳಗೆ ಎಲ್ಲ ಅಸುರರ, ದುರ್ಜನರ ಸಂಹಾರವನ್ನು ಮಾಡಿದ್ದಾನೆ. ಆನಂತರ ಉಪನಯನವನ್ನು ಮಾಡಿಸಿಕೊಳ್ಳುತ್ತಿ ದ್ದಾನೆ. ಎಷ್ಟು ಸುಂದರವಾಗಿದೆ ಎಂದರೆ ಉಪನಯನ ಆದ ಕ್ಷಣದಿಂದ ಶ್ರೀಕೃಷ್ಣ ಬ್ರಹ್ಮಚರ್ಯದಿಂದ ಇರಬೇಕು. ಹನ್ನೆರಡು ವರ್ಷಗಳ ಕಾಲ ವೇದಗಳ ಅಧ್ಯಯನವನ್ನು ಮಾಡಬೇಕು. ಕೃಷ್ಣ ಪರಮಾತ್ಮ ಮುಂದೆ ಅಧ್ಯಯನಕ್ಕೆ ಸಾಂದೀಪಿನಿ ಮುನಿಗಳ ಹತ್ತಿರ ಹೋಗುತ್ತಿ ದ್ದಾನೆ.
ಉಪನಯನ ಆದ ಮೇಲೆ ಬ್ರಹ್ಮಚರ್ಯದಿಂದ ಇದ್ದು ವೇದಾಧ್ಯಯನ ಮಾಡಬೇಕು ಎನ್ನುವ ಸೂಚನೆಯನ್ನು ನೀಡುತ್ತಿದ್ದಾನೆ. ಇದ ರಿಂದ ತನ್ನ ಜನರಿಗೆ ಒಂದು ಸಂದೇಶವನ್ನು ನೀಡುತ್ತಿದ್ದಾನೆ. ನೀವು ದುಷ್ಟಕಾಮವನ್ನು ಕಳೆದುಕೊಂಡು ಆಮೇಲೆ ಉಪನಯನ ಮಾಡಿ ಕೊಳ್ಳಿ, ಉಪನಯನ ಸಂಕಲ್ಪದೊಳಗೆ ಕಾಮಚಾರವನ್ನು ಬಿಡಬೇಕು ಎಂಬುದನ್ನು ತಿಳಿಸಿದ್ದಾರೆ. ಆ ಕಾರಣಕ್ಕೆ ದುಷ್ಟಕಾಮದ ಪ್ರತೀಕನಾದ ಕಂಸನನ್ನು ಕೊಂದು ಈಗ ಉಪನಯನ ಮಾಡಿಕೊಳ್ಳುತ್ತಿದ್ದಾನೆ.