

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಏಳನೇ ಬಜೆಟ್ನಲ್ಲಿ ಮಂಡಿಸಿದ್ದಾರೆ. ಇದೊಂದು ವಾಸ್ತವಿಕತೆ ಆಧರಿಸಿದ ಮುಂಗಡಪತ್ರ. ರಾಜ್ಯದ ಒಟ್ಟಾರೆ ಬೆಳವಣಿಗೆಯ ದರ ಶೇ.7.8ರಿಂದ 6.8ಕ್ಕೆ ಇಳಿದಿರುವ ನಡುವೆಯೇ ಕೃಷಿ, ನೀರಾವರಿ, ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಪ್ರಾದೇಶಿಕ ಸಮತೋಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಿರುವುದು ಕಂಡು ಬರುತ್ತದೆ.