ಎಲ್ಲಿ ಯೋಜನೆ ಇದೆಯೋ ಅಲ್ಲಿ ಮಮತಾ ಬ್ಯಾನರ್ಜಿ ಹಗರಣ: ಪ್ರಧಾನಿ ಮೋದಿ ಟೀಕೆ

Narendra modi and Mamatha banerjee
Published on

ಕಲ್ಕತ್ತ: ಎಲ್ಲಿ ಯೋಜನೆ ಇದೆಯೋ ಅಲ್ಲಿ ಹಗರಣ ನಡೆಸುತ್ತೇವೆ ಎಂಬುದು ಟಿಎಂಸಿ ಸರ್ಕಾರದ ನೀತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಪಶ್ಚಿಮ ಬಂಗಾಳದ ಬಂಕೂರಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಭ್ರಷ್ಟಾಚಾರದ ಆಟ ಇನ್ಮುಂದೆ ಬಂಗಾಳದಲ್ಲಿ ನಡೆಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಅವರನ್ನು ಕೆಣಕಿದ್ದಾರೆ. ನಿಜವಾದ ಬದಲಾವಣೆಯನ್ನು ಇನ್ನಷ್ಟೇ ಕಾಣಬೇಕಿದೆ ಎಂದು ಮೋದಿ ಹೇಳಿದರು.

ದೀದಿ ಹೇಳುತ್ತಾರೆ, ನನ್ನ ಮುಖವನ್ನು ನೋಡಲು ಇಷ್ಟವಿಲ್ಲ ಎಂದು, ಆದರೆ, ಬಂಗಾಳ ಜನಕ್ಕೆ ನಿಮ್ಮ ಮುಖ ನೋಡಲು ಇಷ್ಟವಿಲ್ಲ. ಮೇ 2 ರಂದು ಇದು ನಿಮಗೆ ಗೊತ್ತಾಗಲಿದೆ ಎಂದು ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ತಿಂಗಳು 27 ರಂದು ಪಶ್ಚಿಮ ಬಂಗಾಳ ವಿಧಾನಸಭೆಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಟಿಎಂಸಿ ನಡುವೆ ಬಹುದೊಡ್ಡ ಜಿದ್ದಾಜಿದ್ದಿ ಏರ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net