

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮದುವೆ ಕುರಿತು ಇದೀಗ ಪ್ರಶ್ನೆಯೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ದಾಂಪತ್ಯ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನೀವ್ಯಾಗ ಮದುವೆ ಆಗ್ತೀರಾ ಎಂದು ಯುವತಿಯೊಬ್ಬಳು ಕೇಳಿದ ಪ್ರಶ್ನೆಗೆ ಸದ್ಯ ರಾಹುಲ್ ಕೊಟ್ಟ ಉತ್ತರ ಇದೀಗ ವೈರಲ್ ಆಗಿದೆ.
ಶ್ರೀನಗರಕ್ಕೆ ಭೇಟಿ ಕೊಟ್ಟ ರಾಹುಲ್ ಗಾಂಧಿ ಅಲ್ಲಿನ ಮಹಿಳಾ ವಿದ್ಯಾರ್ಥಿಗಳ ಜತೆ ಕೆಲ ಸಮಯ ಸಂವಾದ ನಡೆಸಿದರು. ರಾಜಕೀಯ, ಉದ್ಯೋಗ, ಶಿಕ್ಷಣ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ವೇಳೆ ದಿಢೀರ್ ಮದುವೆ ವಿಚಾರ ಪ್ರಸ್ತಾಪಿಸಿದ ಯುವತಿಯೊಬ್ಬಳು, ಸರ್ ನೀವು ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡ್ತೀರಿ? ಮದುವೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರಾಹುಲ್, "ನಾನು ಕಳೆದ 20-30 ವರ್ಷಗಳಿಂದ ಆ ಒತ್ತಡವನ್ನು ಮೀರಿ ಬಂದಿದ್ದೀನಿ. ಆದಷ್ಟು ಬೇಗ ಆದರೆ ಒಳ್ಳೆಯದು. ಈ ವಿಷಯಲ್ಲಿ ಪ್ಲ್ಯಾನ್ ಅಂತೇನಿಲ್ಲ. ನಾನು ಯೋಜನೆ ಎಲ್ಲಾ ಹಾಕಿಕೊಳ್ಳಲ್ಲ. ಅದೆಲ್ಲವೂ ನಡೆಯಬೇಕು" ಎಂದರು. ನಿಮ್ಮ ಮದುವೆಗೆ ನಮ್ಮನ್ನು ಕರೆಯೋದು ಮರೆಯಬೇಡಿ ಎಂದಿದ್ದಕ್ಕೆ, "ಖಂಡಿತವಾಗಿ ನಿಮ್ಮನ್ನೆಲ್ಲಾ ಆಹ್ವಾನಿಸುತ್ತೇನೆ" ಎಂದು ಹೇಳಿದರು,(ಏಜೆನ್ಸೀಸ್).